ನಿರ್ಮಾಣವಾಗುತ್ತಿದೆ ಫೇಸ್ ಬುಕ್ ವಿಲೇಜ್ |News Mirchi

ನಿರ್ಮಾಣವಾಗುತ್ತಿದೆ ಫೇಸ್ ಬುಕ್ ವಿಲೇಜ್

ಸಾಮಾಜಿಕ ತಾಣಗಳ ದಿಗ್ಗಜ ಫೇಸ್ ಬುಕ್, ತನ್ನ ಉದ್ಯೋಗಿಗಳಿಗಾಗಿ ಒಂದು ಸಣ್ಣ ಗ್ರಾಮವನ್ನೇ ನಿರ್ಮಿಸಲು ಹೊರಟಿದೆ. ಹೌದು ತನ್ನ ಉದ್ಯೋಗಿಗಳಿಗಾಗಿ ಕಟ್ಟಲಿರುವ ಗ್ರಾಮದಲ್ಲಿ 1500 ಅಪಾರ್ಟ್ ಮೆಂಟ್ ಗಳು, ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್,  ಶಾಪಿಂಗ್ ಮಾಲ್ ಗಳು ಇನ್ನೂ ಹಲವು ಸೌಲಭ್ಯಗಳು ಇರಲಿವೆ. ಈ ಗ್ರಾಮಕ್ಕೆ ಈಗಾಗಲೇ “ವಿಲ್ಲೋ ಕ್ಯಾಂಪಸ್” ಎಂಬ ಹೆಸರನ್ನೂ ಇಟ್ಟಿದ್ದಾರೆ.

2021 ರ ವೇಳೆಗೆ ಈ ಗ್ರಾಮ ನಿರ್ಮಾಣದ ಮೊದಲ ಹಂತ ಪೂರ್ಣಗೊಳ್ಳಲಿದೆಯಂತೆ. ಈ ಗ್ರಾಮದಿಂದಾಗಿ ಉದ್ಯೋಗಿಗಳಿಗೆ ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಕಛೇರಿ ತಲುಪಬಹುದು.

ಕ್ಯಾಲಿಫೋರ್ನಿಯಾದಲ್ಲಿನ ಮೆನ್ಲೋ ಪಾರ್ಕ್ ಕ್ವಾರ್ಟರ್ಸ್ ನ ಜಾಗದಲ್ಲಿ 1,24,000 ಚದರಡಿ ಜಾಗದಲ್ಲಿ ಈ ಗ್ರಾಮವನ್ನು ನಿರ್ಮಿಸಲಾಗುತ್ತಿದೆ ಎಂದು ಫೇಸ್ ಬುಕ್ ಹೇಳಿದೆ.

ಇದನ್ನೂ ಓದಿ: ಅವನಿಗೆ ಕೇವಲ 16 ವರ್ಷ, ಆಕೆ 71 ವರ್ಷದ ಮಹಿಳೆ

ಈ ಗ್ರಾಮದಲ್ಲಿ ಕಛೇರಿಗಳನ್ನು ಫೇಸ್ ಬುಕ್ ಉದ್ಯೋಗಿಗಳು ಮಾತ್ರ ಬಳಸಿಕೊಳ್ಳಬಹುದು. ಆದರೆ ಅಪಾರ್ಟ್ ಮೆಂಟ್ ನಲ್ಲಿ ಫೇಸ್ ಬುಕ್ ಉದ್ಯೋಗಿಗಳೇ ಅಲ್ಲದೆ ಬೇರೆಯವರೂ ವಾಸಿಸಬಹುದು ಮತ್ತಿತರೆ ಸೌಲಭ್ಯಗಳನ್ನು ಪಡೆಯಬಹುದು ಎನ್ನಲಾಗಿದೆ.

Loading...
loading...
error: Content is protected !!