ಫೇಸ್ಬುಕ್ ಮೆಸೆಂಜರ್ ರೂಮ್ಸ್ ಬರುತ್ತಿವೆ

ಈಗಿನಂತೆ ಆಗ ಇಂಟರ್ನೆಟ್ ಬಳಕೆ ಈ ಪ್ರಮಾಣದಲ್ಲಿರಲಿಲ್ಲ. ಆ ದಿನಗಳಲ್ಲಿ ಯಾಹೂ ಮೆಸೆಂಜರ್ ತುಂಬಾ ಪ್ರಸಿದ್ಧವಾಗಿತ್ತು. ಅದರಲ್ಲಿ ಚಾಟ್ ರೂಮ್ಸ್ ಇದ್ದವು. ಅಲ್ಲಿ ನಮಗೆ ಪರಿಚಯವೇ ಇಲ್ಲದವರ ಜೊತೆ ಚಾಟ್ ಮಾಡುವ ಅವಕಾಶವಿತ್ತು. ಈಗ ಫೇಸ್ ಬುಕ್ ಮೆಸೆಂಜರ್ ಕೂಡಾ ಅದೇ ರೀತಿಯಲ್ಲಿ ಚಾಟ್ ರೂಮ್ಸ್ ಪರಿಚಯಿಸುತ್ತಿದೆ. ಅದರ ಮೂಲಕ ಸ್ನೇಹಿತರ ಪಟ್ಟಿಯಲ್ಲಿ ಇಲ್ಲದವರ ಜೊತೆಗೂ ಚಾಟ್ ಮಾಡಬಹುದು. ಆದರೆ ಈ ರೂಮ್‌ಗಳು ಟಾಪಿಕ್ ಆಧಾರಿತವಾಗಿರುತ್ತವೆ. ಆಸಕ್ತಿ ಇದ್ದವರು ಆ ರೂಮ್ ಒಳಹೊಕ್ಕು ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಸದ್ಯ ಇದು ಇನ್ನೂ ಪ್ರಯೋಗದ ಹಂತದಲ್ಲಿದೆ.

ಕೆನಡಾ, ಆಸ್ಟ್ರೇಲಿಯಾ ದೇಶಗಳಲ್ಲಿ ಇದನ್ನು ಪರಿಚಯಿಸಲಾಗಿದೆ. ಅಲ್ಲಿಯೂ ಕೇವಲ ಆಯ್ದ ಬಳಕೆದಾರರಿಗೆ ಮಾತ್ರ ಈ ಫೀಚರ್ ಸೌಲಭ್ಯ ನೀಡಿದ್ದಾರೆ. ಅವರಿಂದ ಬರುವ ಅಭಿಪ್ರಾಯಗಳ ಆಧಾರದ ಮೇಲೆ ಬದಲಾವಣೆಗಳನ್ನು ಮಾಡಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಾರೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache