ಆ ಫೋಟೋ ಹಾಕಿ ಫೇಸ್ಬುಕ್ ನಿಂದ ಬ್ಲಾಕ್ ಆದ ಮಹಿಳಾವಾದಿ

‘ಫೆಮಿನಿಸಂ ಇನ್ ಇಂಡಿಯಾ’ ಸಂಸ್ಥೆಯ ಸಂಸ್ಥಾಪಕಿ ಜಪ್ಲೀನ್ ಪಸ್ರಿಚಾ ಗೆ ಮತ್ತೊಮ್ಮೆ ಶಾಕ್ ನೀಡಿದೆ. ‘ಐ ವಾಸ್ ಅಶೇಮ್ಡ್ ಅಟ್ ಮೈ ಬ್ರೆಸ್ಟ್: ಆನ್ ಬ್ರಾಸ್ ಅಂಡ್ ಬ್ರೆಸ್ಟ್’ ಹೆಸರಿನಲ್ಲಿ ಲೇಖನವೊಂದನ್ನು ಬರೆದಿದ್ದ ಆಕೆ, ಅದನ್ನು ನಲ್ಲಿ ಶೇರ್ ಮಾಡಿದ್ದಳು. ಶೇರ್ ಮಾಡಿದ್ದ ಮೂಲ ಲಿಂಕ್ ಮಹಿಳೆಯ ಅರೆನಗ್ನ ಚಿತ್ರಗಳನ್ನು ಹೊಂದಿತ್ತು. ವೆಬ್ ಸೈಟ್ ಲಿಂಕ್‌ನಲ್ಲಿ ಬ್ರಾ ಫೋಟೋ ಇದ್ದಿದ್ದರಿಂದ ಆಕೆಯ ಲೇಖನದ ಪೋಸ್ಟ್ ಬ್ಲಾಕ್ ಮಾಡಿದೆ. ಪಾಲಸಿಗಳಿಗೆ ವಿರುದ್ಧವಾಗಿರುವ ಪೋಸ್ಟ್ ಹಾಕಿದ್ದರಿಂದ ಆಕೆಯ ಪೋಸ್ಟ್ ಬ್ಲಾಕ್ ಮಾಡಿದ್ದಲ್ಲದೆ, ಆಕೆಯನ್ನು ಮೂರು ದಿನಗಳ ಕಾಲ ಬಳಕೆ ಮಾಡದಂತೆ ಸಸ್ಪೆಂಡ್ ಮಾಡಿದೆ.

ಜಪ್ಲೀನ್ ಪಸ್ರಿಚಾಳನ್ನು ಬ್ಯಾನ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮೂರು ಬಾರಿ ಇದೇ ರೀತಿ ಆಕೆಗೆ ನಿರ್ಬಂಧ ವಿಧಿಸಿತ್ತು.

_20161118_090114ಅರೆನಗ್ನಳಾಗಿ ಬೈಕ್ ಸವಾರಿ ಮಾಡುತ್ತಿದ್ದ ಆಫ್ರಿಕಾ ಮಹಿಳೆಯೊಬ್ಬಳ ಫೋಟೋ ಹಾಕಿದಾಗ ಒಮ್ಮೆ, ಸ್ತನಗಳ ಮೇಲೆ ಕವಿತೆ ಬರೆದು ಹಾಕಿದಾಗ ಎರಡನೇ ಬಾರಿ, 2004 ರಲ್ಲಿ ವಿಶೇಷ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ವಿರೋಧಿಸಿ ಮಣಿಪುರ ಮಹಿಳೆಯರ ನಗ್ನ ಪ್ರತಿಭಟನೆಯ ಫೋಟೋ ಶೇರ್ ಮಾಡಿದ್ದಕ್ಕೆ ಮೂರನೆಯ ಬಾರಿ ಈಕೆಯನ್ನು ಫೇಸ್ಬುಕ್ ಸಸ್ಪೆಂಡ್ ಮಾಡಿತ್ತು.

ಮಹಿಳೆಯರ ದೇಹ ಸೌಂದರ್ಯವನ್ನು ತೋರಿಸುವುದನ್ನು ಸಂಪೂರ್ಣ ನಿಷೇಧಿಸುವುದರ ಮೂಲಕ ಫೇಸ್ಬುಕ್ ಪುರುಷವಾದವನ್ನು ಪ್ರದರ್ಶಿಸುತ್ತಿದೆ ಎಂದು ಆಕೆ ಆರೋಪಿಸಿದ್ದಾಳೆ.

Related News

loading...
error: Content is protected !!