ಲಿಂಕ್ಡ್ ಇನ್ ಗೆ ಶಾಕ್ ನೀಡಲಿರುವ ಫೇಸ್ಬುಕ್, ಇನ್ನು ಫೇಸ್ಬುಕ್ ನಲ್ಲಿಯೇ ಉದ್ಯೋಗ ಹುಡುಕಿ

ಸೋಷಿಯಲ್ ಮೀಡಿಯಾ ದಿಗ್ಗಜ ಫೇಸ್ಬುಕ್ ಮತ್ತೊಂದು ಅದ್ಭುತ ಫೀಚರ್ ಅನ್ನು ಪರಿಚಯಿಸುತ್ತಿದೆ. ಪ್ರಸಿದ್ಧ ಜಾಬ್ ಪೋರ್ಟಲ್ ಲಿಂಕ್ಡ್ ಇನ್ ಗೆ ಶಾಕ್ ನೀಡಲಿರುವ ಫೇಸ್ಬುಕ್ ಇನ್ನು ಮುಂದೆ ಫೇಸ್ಬುಕ್ ನಲ್ಲಿಯೇ ಫೇಸ್ಬುಕ್ ಬಳಕೆದಾರರಿಗೆ ತಮ್ಮ ಉದ್ಯೋಗಗಳನ್ನು ಹುಡುಕಿಕೊಳ್ಳಲು ಅನುಕೂಲವಾಗುವಂತೆ ಈ ಹೊಸ ಫೀಚರ್ ಇರಲಿದೆ. ಇದರಿಂದಾಗಿ ಅತ್ತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಂಸ್ಥೆಗಳಿಗೂ ಅನುಕೂಲವಾಗಲಿದೆ. ಮೊದಲು ಈ ಫೀಚರ್ ಅನ್ನು ಫೇಸ್ಬುಕ್ ಅಮೆರಿಕಾ, ಕೆನಡಾಗಳಲ್ಲಿ ಪರಿಚಯಿಸಲಿದೆ. ನಂತರ ವಿಶ್ವಾದ್ಯಂತ ಲಭ್ಯವಾಗಲಿದೆ.

ಫೇಸ್ಬುಕ್ ನ ಈ ಹೊಸ ಫೀಚರ್ ನಿಂದಾಗಿ ಈ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ನಿಂತಿರುವ ಲಿಂಕ್ಡ್ ಇನ್ ಗೆ ಪ್ರಬಲ ಸ್ಪರ್ಧೆ ಎದುರಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಹೊಸ ವೈಶಿಷ್ಟ್ಯದ ಮೂಲಕ ಉದ್ಯೋಗ ನೀಡುವ ಕಂಪನಿಗಳು ಇನ್ನು ಮುಂದೆ ನೇರವಾಗಿ ಫೇಸ್ಬುಕ್ ನಲ್ಲಿ ತಮಗೆ ಒಂದು ಫೇಸ್ ಬುಕ್ ಪುಟ ಕ್ರಿಯೇಟ್ ಮಾಡಿಕೊಳ್ಳಬಹುದು. ಅದರಲ್ಲಿ ಯಾವ ಯಾವ ಉದ್ಯೋಗಗಳು ಖಾಲಿ ಇವೆ ಎಂಬುದನ್ನು ಪ್ರಕಟಿಸಬಹುದು. ಅತ್ತ ಉದ್ಯೋಗದ ಹುಡುಕಾಟದಲ್ಲಿರುವವರು ತಮ್ಮ ಫೇಸ್ ಬುಕ್ ಖಾತೆಯಿಂದ ‘ಜಾಬ್ಸ್’ ಎಂಬ ಟ್ಯಾಬ್ ಒತ್ತಿ ಯಾವ ಕಂಪನಿಗಳಲ್ಲಿ ಯಾವ ಉದ್ಯೋಗಗಳಿವೆ ಎಂಬುದನ್ನು ನೋಡಿಕೊಳ್ಳಬಹುದು. ಒಂದು ವೇಳೆ ಆ ಉದ್ಯೋಗ ಇಷ್ಟವಾದರೆ ಕೂಡಲೇ ಅಲ್ಲಿಯೇ ಇರುವ ಅಪ್ಲೈ ಬಟನ್ ಒತ್ತುವ ಮೂಲಕ ಅರ್ಜಿ ಸಲ್ಲಿಸಬಹುದು. ಅದರಲ್ಲಿ ಕೆಲ ವಿವರಗಳನ್ನು ಫೇಸ್ ಬುಕ್ ತಾನೇ ತುಂಬಿಸುತ್ತದೆ. ಅಭ್ಯರ್ಥಿ ಬೇಕೆಂದರೆ ಆ ವಿವರಗಳನ್ನು ತಿದ್ದುಪಡಿ ಮಾಡಬಹುದು. ಇದರಿಂದಾಗಿ ಅಭ್ಯರ್ಥಿ ಮತ್ತು ಕಂಪನಿಗಳಿಗೂ ಉದ್ಯೋಗ ನೇಮಕಾತಿಯ ಕೆಲಸ ಸುಲಭವಾಗಲಿದೆ.

Loading...

Leave a Reply

Your email address will not be published.

error: Content is protected !!