ಗುಜರಾತ್ ಚುನಾವಣೆ: ಇನ್ನೂ ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ – News Mirchi

ಗುಜರಾತ್ ಚುನಾವಣೆ: ಇನ್ನೂ ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಮಿನೇಷನ್ ಮುಗಿಯಲು ಇನ್ನು ಎರಡೇ ದಿನಗಳು ಬಾಕಿ ಇದ್ದರೂ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಇನ್ನೂ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ. ಪಕ್ಷದಲ್ಲಿನ ಆಂತರಿಕ ಕಚ್ಚಾಟಗಳು, ಪಟೇಲ್ ಸಮುದಾಯದ ಚಳುವಳಿಯಿಂದಾಗಿ ಜಾತಿ ಲೆಕ್ಕಾಚಾರಗಳು ಒಂದು ಹಂತಕ್ಕೆ ಬರದ ಕಾರಣ ಅಭ್ಯರ್ಥಿಗಳ ಅಂತಿಮ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಪಟೇಲ್ ಸಮುದಾಯದ ಮೀಸಲಾತಿ ಚಳುವಳಿಯ ನಾಯಕರು, ಹಿರಿಯ ಕಾಂಗ್ರೆಸ್ ನಾಯಕರ ಭೇಟಿ ನಂತರ ಭಾನುವಾರ ರಾತ್ರಿ ಪಟ್ಟಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಹಾರ್ಧಿಕ್ ಪಟೇಲ್ ನೇತೃತ್ವದ ಪಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ಕಾಂಗ್ರೆಸ್ ನಿಂದ 20 ಸ್ಥಾಗಳಿಗೆ ಹಠ ಹಿಡಿದಿದ್ದು, ಅಲ್ಪೇಶ್ ಠಾಕೂರ್ ನೇತೃತ್ವದ ಒಬಿಸಿ ಗ್ರೂಪ್ 12 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ತಡವಾಗುತ್ತಿದೆ.

ಅಲ್ಪೇಶ್ ಠಾಕೂರ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮತ್ತೊಂದು ಕಡೆ ಪಕ್ಷದಲ್ಲಿನ ಆಂತರಿಕ ಭಿನ್ನಮತ ಕೂಡಾ ಪಟ್ಟಿ ತಡವಾಗಲು ಕಾರಣವೆನ್ನಲಾಗುತ್ತಿದೆ. ಹೀಗೆ ಮೊದಲ ಹಂತದ ಮತದಾನಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ಹೆಣಗಾಡುತ್ತಿದ್ದರೆ, ಅತ್ತ ಬಿಜೆಪಿ ಎರಡು ಹಂತಗಳಲ್ಲಿ 106 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

Get Latest updates on WhatsApp. Send ‘Add Me’ to 8550851559

Loading...