ಸ್ವಾತಂತ್ರ್ಯ ದಿನಾಚರಣೆ, ಈ ಹತ್ತು ವಿಷಯಗಳು ನಿಮಗೆ ತಿಳಿದಿರಲಿ – News Mirchi

ಸ್ವಾತಂತ್ರ್ಯ ದಿನಾಚರಣೆ, ಈ ಹತ್ತು ವಿಷಯಗಳು ನಿಮಗೆ ತಿಳಿದಿರಲಿ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಇಡೀ ಭಾರತವೇ ಸಿದ್ಧವಾಗುತ್ತಿದೆ. ಹಳ್ಳಿಯಿಂದ ದೆಹಲಿಯವರೆಗೂ ದೇಶಾದ್ಯಂತ ಆಗಸ್ಟ್ 15 ರಂದು ತ್ರಿವರ್ಣ ದ್ವಜ ಹಾರಾಡುತ್ತದೆ. 200 ವರ್ಷಗಳ ಬ್ರಿಟೀಷ್ ಆಡಳಿತದಿಂದ ವಿಮುಕ್ತಿಗಾಗಿ ಹಲವಾರು ಹಿರಿಯರು ದೀರ್ಘಕಾಲ ಹೋರಾಟ ನಡೆಸಿದರು. ಹಲವರ ಹೋರಾಟ, ತ್ಯಾಗ ಬಲಿದಾನಗಳಿಂದಾಗಿ 1947 ಆಗಸ್ಟ್ 15 ರಂದು ನಮ್ಮ ದೇಶ ಸ್ವತಂತ್ರವಾಯಿತು. ಹಾಗಾಗಿಯೇ ಆಗಸ್ಟ್ 15 ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿ ಉಳಿದಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಆಗಸ್ಟ್ 15 ರ ಹಿಂದಿನ ಕೆಲವು ವಿಷಯಗಳನ್ನು ತಿಳಿಯೋಣ….

1. ಆಗಸ್ಟ್ 15 ರಂದು ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಇದೇ ದಿನ ಭಾರತದೊಂದಿಗೆ ಕೊರಿಯಾ, ಕಾಂಗೋ, ಬಹ್ರೇನ್, ಲೀಚೆನ್ಸ್’ಟೀನ್ ದೇಶಗಳು ಕೂಡಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತವೆ.

2. ಆಗಸ್ಟ್ 15 ನ್ನು ಆಯ್ಕೆ ಮಾಡಿದ್ದು ಕೊನೆಯ ಬ್ರಿಟೀಶ್ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್. ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ಶರಣಾಗಿ ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ಅವರು ಈ ದಿನಾಂಕವನ್ನು ಸೂಚಿಸಿದ್ದರು. ಸಿಂಗಾಪುರದಲ್ಲಿ ಜಪಾನ್ ಶರಣಾಗತಿಯನ್ನು ಅಂಗೀಕರಿಸಿದ ಸೌತ್ ಈಸ್ಟ್ ಏಷ್ಯಾ ಕಮಾಂಡ್ ಗೆ ಮೌಂಟ್ ಬ್ಯಾಟನ್ ಸುಪ್ರೀಂ ಅಲೈಡ್ ಕಮಾಂಡರ್ ಆಗಿದ್ದರು.

3. ರಾಷ್ಟ್ರಗೀತೆ “ಜನ ಗಣ ಮನ”ವನ್ನು ರವೀಂದ್ರನಾಥ ಠಾಗೂರ್ ರಚಿಸಿದ್ದಾರೆಂಬುದು ನಮಗೆಲ್ಲಾ ತಿಳಿದದ್ದೇ. ಸತ್ಯ ಏನೆಂದರೆ ಈ ಗೀತೆಯನ್ನು ಬ್ರಿಟೀಷ್ ರಾಜ ಜಾರ್ಜ್ ವಿ ಗೌರವಾರ್ಥವಾಗಿ ಠಾಗೂರ್ ಈ ಗೀತೆಯನ್ನು ರಚಿಸಿದ್ದರು. 1911 ರಲ್ಲಿ ಕಿಂಗ್ ಜಾರ್ಜ್ ಭಾರತಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರಿಗೆ ಸ್ವಾಗತ ನೀಡಲು ಈ ಗೀತೆಯನ್ನು ಠಾಗೂರ್ ಸಿದ್ಧಪಡಿಸಿದ್ದರು.

4. ರಾಷ್ಟ್ರೀಯ ಗಾನ “ವಂದೇ ಮಾತರಂ”ವನ್ನು ಕವಿ ಮತ್ತು ಲೇಖಕ ಬಂಕಿಮಚಂದ್ರ ಚಟರ್ಜಿ ರಚಿಸಿದರು. ವಾಸ್ತವದಲ್ಲಿ ಇದೊಂದು ಪದ್ಯದ ಭಾಗ. ಚಟರ್ಜಿಯವರು ರಚಿಸಿದ “ಆನಂದ ಮಠ” ಕೃತಿಯ ಮೊದಲ ಎರಡು ಚರಣಗಳನ್ನು ತೆಗೆದುಕೊಂಡು ರಾಷ್ಟ್ರೀಯ ಗಾನವೆಂದು ಪ್ರಕಟಿಸಲಾಯಿತು.

5. ಭಾರತದ ಸ್ವಾತಂತ್ರ್ಯ ಹೋರಾಟ 1857 ರಲ್ಲಿಯೇ ಆರಂಭಾಗಿತ್ತು. ಮಂಗಲ್ ಪಾಂಡೆ ನಾಯಕತ್ವದಲ್ಲಿ ಮೊದಲ ಸಿಪಾಯಿ ದಂಗೆ ನಡೆಯಿತು. ಈ ದಂಗೆಯ ನಂತರ ಬ್ರಿಟೀಷರ ವಿರುದ್ಧ ಝಾನ್ಸಿ ಲಕ್ಷೀಬಾಯಿ, ತಾಂತ್ಯಾ ಟೋಪಿ, ಬಹದ್ದೂರ್ ಶಾ ಜಾಫರ್, ನಾನಾ ಸಾಹೇಬ್ ಮುಂತಾದ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮುಂದುವರೆಸಿದರು.

6. ಭಾರತ, ಪಾಕಿಸ್ತಾನ ಪ್ರತ್ಯೇಕವಾದಾಗ ಅರಸರ ಆಡಳಿತದಲ್ಲಿದ್ದ ಜಮ್ಮೂ ಕಾಶ್ಮೀರ ತಟಸ್ಥವಾಗಿತ್ತು. ರಾಜ್ಯದಲ್ಲಿ ಮುಸ್ಲಿಮರು ಹೆಚ್ಚಾಗಿರುವುದರಿಂದ ಪಾಕಿಸ್ತಾನದಲ್ಲೇ ಜಮ್ಮೂ ಕಾಶ್ಮೀರ ಸೇರಬಹುದು ಎಂದು ಪಾಕಿಸ್ತಾನ ಯೋಚಿಸಿತ್ತು. ಆದರೆ ಅಂದಿನ ಹಿಂದೂ ಅರಸ ಜಮ್ಮೂ ಕಾಶ್ಮೀರವನ್ನು ಭಾರತದಲ್ಲಿ ವಿಲೀನ ಮಾಡಿದರು. 1947 ರ ಅಕ್ಟೋಬರ್ ನಲ್ಲಿ ಜಮ್ಮೂ ಕಾಶ್ಮೀರ ಭಾರತದಲ್ಲಿ ವಿಲೀನವಾಯಿತು.

7. ವಿದೇಶೀ ವಸ್ತುಗಳನ್ನು ಬಹಿಷ್ಕರಿಸುತ್ತಾ ಸ್ವದೇಶೀ ವಸ್ತುಗಳನ್ನು ಬೆಂಬಲಿಸಿ 1900 ರ ಆರಂಭದಲ್ಲಿ ಬಾಲಗಂಗಾಧರ ತಿಲಕರೊಂದಿಗೆ ಸೇರಿ ಸರ್ ರತನ್ ಜಮ್ಷೆಡ್ ಟಾಟಾ ಬಾಂಬೇ ಸ್ವದೇಶೀ ಕೋ ಆಪರೇಟಿವ್ ಸ್ಟೋರ್ಸ್ ಕೋ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಸದ್ಯ ಅದು ಬಾಂಬೇ ಸ್ಟೋರ್ ಎಂದು ಪ್ರಸಿದ್ಧಿಯಾಗಿದೆ.

8. ರಾಷ್ಟ್ರಗೀತೆಯಾಗಿ ವಂದೇ ಮಾತರಂ ಬದಲು “ಜನ ಗಣ ಮನ” ವನ್ನು ಆಯ್ಕೆ ಮಾಡಲಾಯಿತು. ಆರ್ಮಿ ಬ್ಯಾಂಡ್ ನಲ್ಲಿ ಬಾರಿಸಲು “ವಂದೇ ಮಾತರಂ” ಗಿಂತಲೂ “ಜನ ಗಣ ಮನ” ವೇ ಸುಲಭವಾಗಿರುತ್ತದೆ ಎಂದು ಜವಹರ್ ಲಾಲ್ ನೆಹರೂ ಭಾವಿಸಿದ್ದರಂತೆ.

9. ಭಾರತ, ಪಾಕಿಸ್ತಾನಗಳ ನಡುವಿನ ಗಡಿಯನ್ನು ಸಿರಿಲ್ ಜಾನ್ ರ್ಯಾಡ್ ಕ್ಲಿಫ್ ಎಂಬಾತ ತೀರ್ಮಾನಿಸಿದರು. ಈತನಿಗೆ ಭಾರತದ ಭೌಗೋಳಿಕ ಅಂಶಗಳ ಕುರಿತು ಅಷ್ಟಾಗಿ ಮಾಹಿತಿ ಇರಲಿಲ್ಲವಾದರೂ ಗಡಿಯನ್ನು ತೀರ್ಮಾನಿಸಿದರು. ತಮ್ಮ ಈ ತೀರ್ಮಾನಕ್ಕೆ ಕೊನೆ ಉಸಿರಿರುವವರೆಗೂ ರ್ಯಾಡ್ ಕ್ಲಿಫ್ ಬೇಸರಗೊಳ್ಳುತ್ತಿದ್ದರಂತೆ.

10. ಇಂಡಿಯಾ ಎಂಬ ಹೆಸರನ್ನು ಇಂಡಸ್(ಸಿಂಧೂ) ನದಿಯಿಂದ ತೆಗೆದುಕೊಳ್ಳಲಾಗಿದೆ. ಅತ್ಯಂತ ಪ್ರಾಚೀನ ಸಿಂಧೂ ನಾಗರೀಕತೆಗೆ ಸಾಕ್ಷಿಯಾಗಿ ಈ ಹೆಸರನ್ನು ತೆಗೆದುಕೊಳ್ಳಲಾಗಿದೆ.

Loading...