ಅಂತಿಂಥ ಮೀನಲ್ಲ, ನಾರಾಯಣ ಎಂದರೆ ಸಾಕು ಈಜಿ ಬಂದು ಇಣುಕಿ ನೋಡುತ್ತೆ |News Mirchi

ಅಂತಿಂಥ ಮೀನಲ್ಲ, ನಾರಾಯಣ ಎಂದರೆ ಸಾಕು ಈಜಿ ಬಂದು ಇಣುಕಿ ನೋಡುತ್ತೆ

ಸಾಂಗ್ಲಿ:  ಕಳೆದೆರಡು ತಿಂಗಳುಗಳಿಂದ ಅಕ್ಕ ಪಕ್ಕದ ಗ್ರಾಮಸ್ಥರು ಇಲ್ಲಿನ ರೈತರೊಬ್ಬರ ಬಾವಿಗೆ ಕುತೂಹಲದಿಂದ ಮೀನೊಂದನ್ನು ನೋಡಲು ಧಾವಿಸುತ್ತಿದ್ದಾರೆ. ರೈತ ಮತ್ತು ಆತ ಸಾಕಿದ ಮೀನಿನ ನಡುವಿನ ಆತ್ಮೀಯತೆಯನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಎದೆಮಚ್ಚೀಂದ್ರ ಗ್ರಾಮದ 60 ವರ್ಷ ಪ್ರಕಾಶ್ ಪಾಟೀಲ್ ತಮ್ಮ ತೋಟದ ಬಾವಿಯ ಬಳಿ ಹೋಗಿ “ನಾರಾಯಣ, ನಾರಾಯಣ ಇಲ್ಲಿ ಬಾ” ಎಂದರೆ ಸಾಕು, ರೈತ ನಿಂತಿರುವ ಬಾವಿಯ ಒಂದು ಅಂಚಿಗೆ ಈಜುತ್ತಾ ಬಂದು ರೈತನತ್ತ ಇಣುಕಿ ನೋಡುತ್ತದೆ ಆ ಮೀನು. ಆಗ ರೈತ ಅದನ್ನು ಕೈಗೆ ತೆಗೆದುಕೊಂಡು ಮುದ್ದಿಸಿ ಮತ್ತೆ ನೀರಿಗೆ ಬಿಡುತ್ತಾನೆ. ಈ ಕುತೂಹಲಕಾರಿ ವಿಷಯವನ್ನು ಹಲವು ರಾಷ್ಟ್ರೀಯ ಮಾಧ್ಯಮಗಳೂ ವರದಿ ಮಾಡಿವೆ.

ಈ ಮೀನು ಎಂದೋ ಪ್ರಕಾಶ್ ಪಾಟೀಲರ ಆಹಾರವಾಗಬೇಕಿತ್ತಂತೆ. ಜುಲೈ 3 ರಂದು ಪ್ರಕಾಶ್ ಪಾಟೀಲ್ ಅವರು ತೋಟಕ್ಕೆ ಮಗನ ಜೊತೆ ಹೋಗುತ್ತಿದ್ದಾಗ ಕೆಲ ಗ್ರಾಮಸ್ಥರು ಈ ಮೀನನ್ನು ಕೊಟ್ಟು ಫ್ರೈ ಮಾಡಿಕೊಂಡು ತಿನ್ನಲು ಹೇಳಿದ್ದರಂತೆ. ಆದರೆ ಯಾಕೋ ಇವರಿಗೆ ಹಾಗೆ ಮಾಡಲು ಮನಸಾಗದೆ ತೋಟದ ಬಾವಿಗೆ ಬಿಟ್ಟಿದ್ದರು. ಅದೊಂದು ದಿನ ಬಾವಿಯಲ್ಲಿ ಬಕೆಟ್ ನಲ್ಲಿ ನೀರನ್ನು ಎತ್ತಿದಾಗ ಅದರಲ್ಲಿ ಮತ್ತೆ ಈ ಮೀನು ಕಾಣಿಸಿಕೊಂಡಿತ್ತು. ಅದನ್ನು ಅವರು ಕೈಯಲ್ಲಿ ಹಿಡಿದು ಸ್ವಲ್ಪ ಸಮಯದ ನಂತರ ಪುನಃ ನೀರಿಗೆ ಬಿಟ್ಟರಂತೆ. ಅದಕ್ಕೊಂದು ಹೆಸರಿಟ್ಟು ಕರೆಯಲು ಆರಂಭಿಸಿದರು. ಪ್ರತಿದಿನ ಇಲ್ಲಿಗೆ ಬಂದು ನಾರಾಯಣ ಎಂದು ಕೂಗಿದರೆ ಸಾಕು ಬಾವಿಯ ಅಂಚಿಗೆ ಬರುತ್ತಾನಂತೆ. ಹಾಗೆ ಸ್ವಲ್ಪ ಹೊತ್ತು ಕೈಯಲ್ಲಿ ಹಿಡಿದು ಪುನಃ ನೀರಿಗೆ ಬಿಡುತ್ತಾರೆ.

Loading...
loading...
error: Content is protected !!