ರೈತ ಪಡೆದ ನೋಟುಗಳಲ್ಲಿ ಗಾಂಧಿಯೇ ಇಲ್ಲ!

ಮಧ್ಯಪ್ರದೇಶದ ಶಿಯೋಪುರ್ ನ ರೈತನೊಬ್ಬ ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಹಾತ್ಮಾಗಾಂಧಿ ಇಲ್ಲದ 2,000 ರೂ ನೋಟು ಪಡೆದಿದ್ದಾರೆ.

ಲಕ್ಷ್ಮಣ್ ಮೀನಾ ಎಂಬುವವರು ಸ್ಥಳೀಯ ಎಸ್ಬಿಐ ಶಾಖೆಯಿಂದ ರೂ 6,000 ವಿತ್ ಡ್ರಾ ಮಾಡಿದ್ದರು. ಆದರೆ ಅವರು ಪಡೆದ ನೋಟುಗಳಲ್ಲಿ ಮಹಾತ್ಮಾ ಗಾಂಧಿಯ ಭಾವಚಿತ್ರವೇ ಇರಲಿಲ್ಲ.

ಇದು ಮುದ್ರಣದೋಷವಾಗಿದ್ದು, ಇದು ನಕಲಿ ನೋಟು ಅಲ್ಲ ಎಂದು ಸ್ಪಷ್ಟಪಡಿಸಿರುವ ಎಸ್ಬಿಐ ಅಧಿಕಾರಿ ಆರ್.ಕೆ.ಜೈನ್, ಆ ಮುದ್ರಣ ದೋಷವುಳ್ಳ ನೊಟುಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.