ಸಾಲ ಮನ್ನಾ ರಾಷ್ಟ್ರೀಯ ನೀತಿಯಲ್ಲ, ಅದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು – News Mirchi

ಸಾಲ ಮನ್ನಾ ರಾಷ್ಟ್ರೀಯ ನೀತಿಯಲ್ಲ, ಅದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು

ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ರೈತರ ಸಾಲ‌‌ ಮಾಡಿದ ನಂತರ, ದೇಶಾದ್ಯಂತ ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು.

ಸಾಲ ಮನ್ನಾ ರಾಷ್ಟ್ರೀಯ ನೀತಿಯಲ್ಲ, ರೈತರ ಸಾಲ ಮನ್ನಾ ಮಾಡುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಇದೀಗ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರೈತರ ಸಾಲ‌ಮನ್ನಾ ಘೊಷಣೆ ಮಾಡಿದ ಮರುದಿನ ಕೇಂದ್ರ ಈ ಕುರಿತು ಸ್ಪಷ್ಟನೆ ನೀಡಿದೆ.

ಯಾವುದೇ ರಾಜ್ಯ ಸಾಕಷ್ಟು ಸಂಪನ್ಮೂಲ ಹೊಂದಿದ್ದರೆ, ಅಂತಹ ರಾಜ್ಯ ಸಾಲ ಮನ್ನಾ ಮಾಡಬಹುದು. ಪ್ರಕೃತಿ ವಿಕೋಪಗಳಂತಹ ಸಂದರ್ಭಗಳಲ್ಲಿ ಮಾತ್ರ ಕೇಂದ್ರ ಸರ್ಕಾರ ನಿಯಮಗಳನುಸಾರ ನೆರವು ನೀಡಬಹುದು ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. 2008 ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಸಾಲದಲ್ಲಿ ಶೇ.25 ರಷ್ಟು ಮನ್ನಾ ಮಾಡಿ ಬಡ್ಜೆಟ್ ನಲ್ಲಿ ಘೋಷಿಸಿದ್ದರು.

Loading...