ಮೂವರು ಮಕ್ಕಳನ್ನು ಕೊಂದ ಪಾಪಿ ತಂದೆ

ಕುರುಕ್ಷೇತ್ರ: ಅಕ್ರಮ ಸಂಬಂಧ ಒಂದು ಕುಟುಂಬವನ್ನು ಬಲಿ ಪಡೆದಿದೆ. ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೋವಾದಲ್ಲಿನ ಸರ್ಸಸಾ ಗ್ರಾಮದಲ್ಲಿ ವಾಸಿಸುತ್ತಿದ್ದ ಮೂವರು ಮಕ್ಕಳಾದ ಸಮೀರ್(11), ಸಮರ್(4), ಸಿಮ್ರಾನ್(8) ಭಾನುವಾರದಿಂದ ಕಾಣೆಯಾಗಿದ್ದರು, ನಂತರ ಅವರು ಶವಗಳಾಗಿ ಪತ್ತೆಯಾಗಿದ್ದಾರೆ.

ಮಕ್ಕಳು ಕಾಣೆಯಾಗಿದ್ದಾರೆ ಎಂದು ತಾಯಿ ಸುಮನ್ ದೇವಿ ನೀಡಿದ ಮಾಹಿತಿಯಿಂದ ಸಂಬಂಧಿ ರಾಜೇಶ್ ಮಾಲಿಕ್ ಪೊಲೀಸರಿಗೆ ದೂರು ನೀಡಿದ್ದರು. ಸೋನೂ ಮಾಲಿಕ್, ಸುಮನ್ ದೇವಿಗಳ ನಡುವೆ ಕೆಲ ದಿನಗಳಿಂದ ಜಗಳಗಳು ನಡೆಯುತ್ತಿದ್ದವು. ಸೋನೂ ಹಿಮಾಚಲ ಪ್ರದೇಶದ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ಸುಮನ್ ದೇವಿ ಆರೋಪಿಸಿದ್ದರು.

ತಂದೆ ಸೋನೂ ಮಾಲಿಕ್ ಹಾಗೂ ಆತನ ಸಂಬಂಧಿ ಜಗದೀಪ್ ಮಾಲಿಕ್ ರ ಮೇಲೆ ಅನುಮಾನಗೊಂಡ ಪೊಲೀಸರು ಮಂಗಳವಾರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸೋನೂ ಮಾಲಿಕ್ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಮಕ್ಕಳನ್ನು ಕೊಲ್ಲಲು ತನಗೆ ಹೇಳಿದ್ದ, ಹೀಗಾಗಿ ಈ ಕೃತ್ಯವೆಸಗಿದೆ ಎಂದು ಜಗದೀಪ್ ಮಾಲಿಕ್ ತಪ್ಪು ಅಂಗೀಕರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಕ್ಕಳ ಮೃತದೇಹಗಳನ್ನು ಪಂಚಕುಲ ಅರಣ್ಯಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ.

Get Latest updates on WhatsApp. Send ‘Add Me’ to 8550851559

Related News