ಪ್ರಧಾನಿ ವಿರುದ್ಧ ಫತ್ವಾ ಜಾರಿ ಮಾಡಿದ ಮತಾಂಧ – News Mirchi

ಪ್ರಧಾನಿ ವಿರುದ್ಧ ಫತ್ವಾ ಜಾರಿ ಮಾಡಿದ ಮತಾಂಧ

ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಆಪ್ತನೆಂದು ಭಾವಿಸಲಾಗುತ್ತಿರುವ ಮುಸ್ಲಿಂ ಧಾರ್ಮಿಕ ಗುರುವೊಬ್ಬ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾನೆ. ಗರಿಷ್ಟ ಮುಖ ಬೆಲೆಯ ನೋಟು ರದ್ದು ಮಾಡಿದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಟಿಪ್ಪು ಸುಲ್ತಾನ್ ಮಸೀದ್ ಶಾಹೀ ಇಮಾಮ್ ಮೌಲಾನಾ ನುರೂರ್ ರೆಹಮಾನ್ ಬರ್ಕತಿ ಹೆಸರಿನಲ್ಲಿ ಈ ಫತ್ವಾ ಜಾರಿಯಾಗಿದೆ.

ಪ್ರಧಾನಿ ಮೋದಿಗೆ ತಲೆ, ಗಡ್ಡ ಬೋಳಿಸಿ ಮುಖಕ್ಕೆ ಕಪ್ಪು ಮಸಿ ಬಳಿದವರಿಗೆ ರೂ.25 ಲಕ್ಷ ಬಹುಮಾನ ನೀಡುವುದಾಗಿ ಈ ಫತ್ವಾದಲ್ಲಿದೆ.

ನೋಟು ರದ್ದು ಕಾರಣ ಜನಸಾಮಾನ್ಯರಿಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ, ದೇಶದಲ್ಲಿ ಹೆಚ್ಚು ಜನ ಮಮತಾ ಬ್ಯಾನರ್ಜಿಯನ್ನು ಪ್ರಧಾನಿಯಾಗಿ ಬಯಸುತ್ತಿದ್ದಾರೆ ಎಂದು ಬರ್ಕತಿ ಹೇಳಿದ್ದಾನೆ.

ಆಲ್ ಇಂಡಿಯಾ ಮಜ್ಲಿಸ್-ಇ-ಸುರ, ಆಲ್ ಇಂಡಿಯಾ ಮೈನಾರಿಟಿ ಫೋರಂ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಆತ ಈ ಹೇಳಿಕೆ ನೀಡಿದ್ದಾನೆ.

ಧಾರ್ಮಿಕ ಗುರುಗಳು, ಮೇದಾವಿಗಳು ಮಾತ್ರ ಗಡ್ಡ ಬೆಳೆಸುತ್ತಾರೆ, ನರೇಂದ್ರ ಮೋದಿ ಗಡ್ಡ ಬೆಳೆಸಿ ಅಮಾಯಕ ಪ್ರಜೆಗಳನ್ನು ವಂಚಿಸುತ್ತಿದ್ದಾರೆ ಎಂದು ಆತ ಅರೋಪಿಸಿದ್ದಾನೆ.

ಈ ಫತ್ವಾ ಜಾರಿ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ.

Loading...

Leave a Reply

Your email address will not be published.