20 ಸಾವಿರ ಎನ್.ಜಿ.ಒ ಗಳಿಗೆ ಶಾಕ್ ನೀಡಿದ ಕೇಂದ್ರ – News Mirchi

20 ಸಾವಿರ ಎನ್.ಜಿ.ಒ ಗಳಿಗೆ ಶಾಕ್ ನೀಡಿದ ಕೇಂದ್ರ

ನವದೆಹಲಿ: ಎನ್.ಜಿ.ಒ ಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ 20 ಸಾವಿರ ಸರ್ಕಾರೇತರ ಸಂಸ್ಥೆಗಳ ಪರವಾನಗಿಗಳನ್ನು ರದ್ದು ಮಾಡಿ ತೀರ್ಮಾನ ಕೈಗೊಂಡಿದೆ.

ಕೇವಲ 13 ಸಾವರ ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಒ) ಮಾತ್ರ ಸರಿಯಾದ ಲೈಸೆನ್ಸ್ ಹೊಂದಿವೆ, ಉಳಿದ ಸಂಸ್ಥೆಗಳೆಲ್ಲವೂ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಮಂಗಳವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ವಿದೇಶೀಯರ ವಿಭಾಗದ ಮೇಲೆ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆ ಸಮಯದಲ್ಲಿ ದೇಶದಲ್ಲಿ ಒಟ್ಟು 33 ಸಾವಿರ ಎನ್.ಜಿ.ಒ ಗಳು ಇದ್ದು, ಇವುಗಳಲ್ಲಿ 20 ಸಾವಿರ ಸಂಸ್ಥೆಗಳು ಫಾರಿನ್ ಕಂಟ್ರಿಬ್ಯೂಷನ್ ರೆಗ್ಯುಲೇಷನ್ ಕಾಯ್ದೆಯನ್ನು ಉಲ್ಲಂಘಿಸಿವೆ, ಲೈಸೆನ್ಸ್ ವಿಷಯದಲ್ಲಿ ತಪ್ಪು ದಾಖಲೆಗಳನ್ನು ಬಳಸಿಕೊಂಡಿದ್ದಲ್ಲದೆ, ಅಕ್ರಮ ನಡೆಸಿದ್ದಾರೆ, ಆದ್ದರಿಂದಲೇ ಅವರ ಲೈಸೆನ್ಸ್ ಗಳನ್ನು ರದ್ದು ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಸಿದೆ.

Loading...

Leave a Reply

Your email address will not be published.