ನೇಕಾರ ಅಭ್ಯರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ

ಬೆಂಗಳೂರು: ನೇಕಾರ ಮತ್ತು ಅದರ ಉಪಜಾತಿಗಳಲ್ಲಿ (ದೇವಾಂಗ, ಕುರುಹಿನ ಶೆಟ್ಟಿ, ತೊಗಟವೀರ, ಪದ್ಮಸಾಲಿ, ಸ್ವಕುಳಸಾಲಿ, ಕೋಷ್ಠಿ, ಶೆಟ್ಟಿಗಾರ, ಹಟಗಾರ ಇತ್ಯಾದಿ) ಪಿ.ಹೆಚ್.ಡಿ ಪದವಿ ಪಡೆದ ಮತ್ತು ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು, ಎನ್.ಇ.ಟಿ, ಕೆ.ಸೆಟ್ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ.

ಶ್ರೀ ಮುದುನೂರು ಮಹಾಸಂಸ್ಥಾನ ಮಠ ಟ್ರಸ್ಟ್ (ರಿ) ವತಿಯಿಂದ ಸಮುದಾಯದ ಮೇಲ್ಕಂಡ ವಿದ್ಯಾವಂತರ ಸಮ್ಮಿಲನ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಿದ್ದು ಅಭ್ಯರ್ಥಿಗಳನ್ನು ಗೌರವಿಸಲಾಗುವುದು.

ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸಮುದಾಯದ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಕೆಳಕಂಡ ವಿಳಾಸಕ್ಕೆ ಪತ್ರದ ಮೂಲಕ ಅಥವಾ ಖುದ್ದು ಹಾಜರಾಗುವ ಮೂಲಕ ಕಳುಹಿಸಬಹುದು.

ವಿಳಾಸ: ಶ್ರೀ ಮುದುನೂರು ಮಹಾ ಸಂಸ್ಥಾನ ಮಠ ಟ್ರಸ್ಟ್(ರಿ), ಆಡಳಿತ ಕಛೇರಿ:#4, 2ನೇ ಮಹಡಿ, 8 ನೇ ಮೈಲಿ ವೃತ್ತ, ಟಿ.ದಾಸರಹಳ್ಳಿ, ಬೆಂಗಳೂರು-560073.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 

ಡಾ. ಈಶ್ವರಾನಂದ ಸ್ವಾಮೀಜಿ – 9341137882

ರಾಮಸ್ವಾಮಿ ಹಂಪೆಯನುಡಿ – 9241228575