ಚಿತ್ರೀಕರಣ ವೇಳೆ ಭುವನ್ ಕಾಲಿಗೆ ಕಚ್ಚಿದ ಪ್ರಥಮ್? ಆಗಿದ್ದೇನು? |News Mirchi

ಚಿತ್ರೀಕರಣ ವೇಳೆ ಭುವನ್ ಕಾಲಿಗೆ ಕಚ್ಚಿದ ಪ್ರಥಮ್? ಆಗಿದ್ದೇನು?

ಸಂಜು ಮತ್ತು ಗೀತಾ ಧಾರಾವಾಹಿ ಚಿತ್ರೀಕರಣ ವೇಳೆ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ಪ್ರಥಮ್ ಮತ್ತು ಭುವನ್ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಭುವನ್ ಕಾಲಿಗೆ ಪ್ರಥಮ್ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ಭುವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಘರ್ಷಣೆಗೆ ಕಾರಣವೇನು?
ನಿನ್ನೆ ಚಿತ್ರೀಕರಣ ಸ್ಥಳದಲ್ಲಿ ಭುವನ್ ಮತ್ತು ಸಂಜನಾ ಮಾತನಾಡುತ್ತಾ ಕುಳಿತಿದ್ದನ್ನು ಕದ್ದು ಮುಚ್ಚಿ ನೋಡುತ್ತಿದ್ದ ಪ್ರಥಮ್ ರನ್ನು ಭುವನ್ ಪ್ರಶ್ನಿಸಿದ್ದೇ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಎಂದು ಭುವನ್ ಹೇಳಿದ್ದಾರೆ.

  • No items.

ಚಿತ್ರ ಕೃಪೆ: ಈಟಿವಿ ನ್ಯೂಸ್

ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆಯೇ ಪ್ರಥಮ್ ಭುವನ್ ಕಾಲಿನ ತೊಡೆಗೆ ಕಚ್ಚಿದ್ದಾನೆ. ಕೂಡಲೇ ಚಿತ್ರೀಕರಣದಲ್ಲಿದ್ದ ತಂಡದ ಸದಸ್ಯರು ಜಗಳ ಬಿಡಿಸಲು ಮುಂದಾಗಿದ್ದಾರೆ. ಘಟನೆ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಥಮ್, ವಾಗ್ವಾದ ನಡೆದಿದ್ದು ನಿಜ, ಆದರೆ ನಾನು ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್ ನಲ್ಲಿ ನನ್ನ ಮೇಲಿರುವ ಅಸಮಾಧಾನವನ್ನು ಭುವನ್ ಇಲ್ಲಿ ಹೊರಹಾಕಿದ್ದಾರೆ ಎಂದು ಪ್ರಥಮ್ ಹೇಳಿದ್ದಾರೆ. ನಿನ್ನೆ ಘಟನೆ ನಡೆದಿತ್ತು, ಆದರೆ ಪ್ರಚಾರಕ್ಕೆ ಇಂದು ಇದನ್ನು ದೊಡ್ಡದು ಮಾಡ್ತಿದಾರೆ ಎಂದು ಆರೋಪಿಸಿದ್ದಾರೆ.

Loading...
loading...
error: Content is protected !!