ಜಿಎಸ್ಟಿ ದರಗಳು ಪ್ರಕಟ – News Mirchi

ಜಿಎಸ್ಟಿ ದರಗಳು ಪ್ರಕಟ

ನಾಲ್ಕು ಹಂತಗಳಲ್ಲಿ ತೆರಿಗೆ ದರಗಳನ್ನು ಜಿಎಸ್ಟಿ ಮಂಡಳಿ ಗುರುವಾರ ಅಂತಿಮಗೊಳಿಸಿದೆ. ಈ ತೀರ್ಮಾನದ ಅನ್ವಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಶೇ. 5, 12, 18 ಮತ್ತು ಶೇ.28 ರಂತೆ ನಾಲ್ಕು ಹಂತಗಳಲ್ಲಿದೆ. ದಿನಬಳಕೆಯ ವಸ್ತುಗಳಿಗೆ ಕನಿಷ್ಟ ತೆರಿಗೆ ದರ ವಿಧಿಸಲಿದ್ದು, ದುಬಾರಿ ವಸ್ತುಗಳಿಗೆ ಗರಿಷ್ಟ ಮೊತ್ತ ಅನ್ವಯವಾಗಲಿದೆ. ಆಹಾರ ಪದಾರ್ಥಗಳಂತಹ ವಸ್ತುಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ. ಉಳಿದ ದಿನಬಳಕೆಯ ವಸ್ತುಗಳಿಗೆ ಶೇ.5 ರಷ್ಟು ತೆರಿಗೆ, ಇತರ ವಸ್ತುಗಳಿಗೆ ಶೇ. 12, ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಮುಂದಿನ ಏಪ್ರಿಲ್ ನಿಂದ ಹೊಸ ಜಿಎಸ್ಟಿ ಪದ್ದತಿ ಜಾರಿಗೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸದಸ್ಯರನ್ನೊಳಗೊಂಡಿದ್ದ ಉನ್ನತಮಟ್ಟದ ಜಿಎಸ್ಟಿ ಮಂಡಳಿ ಗುರುವಾರ ಸಭೆ ಸೇರಿತ್ತು. ಈ ಸಭೆಯ ನಂತರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಜಿಎಸ್ಟಿ ದರಗಳನ್ನು ಪ್ರಕಟಿಸಿದರು. ಸದ್ಯ ಎಕ್ಸೈಜ್ ಡ್ಯೂಟಿ, ವ್ಯಾಟ್ ಸೇರಿ 30 ರಿಂದ 31 ರಷ್ಟು ತೆರಿಗೆ ವಿಧಿಸುತ್ತಿರುವ ವಸ್ತುಗಳಿಗೆ ಜಿಎಸ್ಟಿ ಪ್ರವೇಶದಿಂದ ಗರಿಷ್ಟ ಶೇ. 28 ರಷ್ಟು ತೆರಿಗೆ ಬೀಳಲಿದೆ ಎಂದು ಅವರು ಹೇಳಿದರು.

Click for More Interesting News

Loading...

Leave a Reply

Your email address will not be published.

error: Content is protected !!