100 ಕೋಟಿ ಕ್ಲಬ್ ಸೇರಿದ ಮೋಹನ್ ಲಾಲ್ ಚಿತ್ರ

ಮಾಲಿವುಡ್ ಎಂದು ಕರೆಯಲಾಗುವ ಮಲಯಾಳಂ ಚಿತ್ರರಂಗ ಇದೇ ಮೊದಲ ಬಾರಿಗೆ 100 ಕೋಟಿ ಕ್ಲಬ್ ಸೇರಿದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿದ ‘ಪುಲಿಮುರುಗನ್’ ಚಿತ್ರ ರೂ. 100 ಕೋಟಿ ವಸೂಲಿ ಮಾಡಿದೆ. ಈ ಮೂಲಕ ಮಾಲಿವುಡ್ ನಲ್ಲಿ 100 ಕೋಟಿ ವಸೂಲಿ ಮಾಡಿದ ಮೊದಲ ಚಿತ್ರವಾಗಿ ದಾಖಲೆ ಮಾಡಿದೆ. ಈ ವಿಷಯವನ್ನು ಸ್ವತಃ ಮೋಹನ್ ಲಾಲ್ ಅವರೇ ಫೇಸ್ಬುಕ್ ಖಾತೆಯ ಮೂಲಕ ಪ್ರಕಟಿಸಿದ್ದಾರೆ.

ಈ ಹಿಂದೆ ‘ದೃಶ್ಯಂ’ ಚಿತ್ರ ರೂ. 70 ಕೋಟಿ ವಸೂಲಿ ಮಾಡಿತ್ತು. ಈಗ ಆ ದಾಖಲೆಯನ್ನು ‘ಪುಲಿಮುರುಗನ್’ ಬ್ರೇಕ್ ಮಾಡಿದೆ. ಈ ಎರಡೂ ಚಿತ್ರಗಳು ಮೋಹನ್ ಲಾಲ್ ಅವರದ್ದೇ ಆಗಿರುವುದು ಮತ್ತೊಂದು ವಿಶೇಷ. 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಚಿತ್ರ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸದ್ಯ 80 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.