ಎಮೋಜಿ ಹುಡುಕಿ, ಬೇಕಾದ ಫಾಂಟ್ ಬದಲಿಸಿ, ಇದು ಹೊಸ ವಾಟ್ಸಾಪ್ ಫೀಚರ್

ವಾಟ್ಸಾಪ್ ಇದೀಗ ತನ್ನ ಹೊಸ ಅಪ್ಡೇಟ್ ನಲ್ಲಿ ಕೆಲ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿದೆ. ಫಾಂಟ್ ಬದಲಾಯಿಸಲು ಅನುಕೂಲವಾಗುವ ಟೆಕ್ಸ್ಟ್ ಟೂಲ್ ಬಾರ್ ಮತ್ತು ಎಮೋಜಿ ಹುಡುಕುವ ಫೀಚರ್ ಗಳನ್ನು ಸೇರಿಸುತ್ತಿದೆ. ವರದಿಗಳ ಪ್ರಕಾರ, ಆಂಡ್ರಾಯ್ಡ್ ನ 2.17.148 ವರ್ಷನ್ ನಲ್ಲಿ ಫ್ಲೋಟಿಂಗ್ ಟೆಕ್ಸ್ಟ್ ಟೂಲ್ ಬಾರ್ ಮೂಲಕ ಬಳಕೆದಾರರು ತಮಗೆ ಇಷ್ಟವಾದ ಫಾಂಟ್ ಗಳನ್ನು ಆಯ್ಕೆ ಮಾಡಿ ಬರೆಯಬಹುದು.

ಫಾಂಟ್ ಬದಲಿಸಲು ನೀವು ಮೊದಲು ಫ್ಲೋಟಿಂಗ್ ಟೆಕ್ಸ್ಟ್ ಟೂಲ್ ಬಾರ್ ಮೇಲಿನ ಬಟನ್ ಅಥವಾ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ಫಾಂಟ್ ಅನ್ನು ಬೋಲ್ಡ್, ಇಟಾಲಿಕ್ ಸ್ಟ್ರೈಕ್ ಥ್ರೂ ಆಯ್ಕೆಗಳನ್ನೂ ಬಳಸಿಕೊಂಡು ಫಾಂಟ್ ಶೈಲಿಯನ್ನು ಬದಲಾಯಿಸಲು ಅವಕಾಶವಿದೆ. ಚಿಹ್ನೆಗಳನ್ನು ನೆನಪಿಟ್ಟುಕೊಂಡು ಫಾಂಟ್ ವಿನ್ಯಾಸ ಬದಲಿಸುವುದು ಕೆಲವರಿಗೆ ಕಷ್ಟವಾಗಿದ್ದು, ಈ ಹೊಸ ಅಪ್ಡೇಟ್ ನಿಂದ ಸುಲಭವಾಗಬಹುದು.

ಎರಡನೆಯದಾಗಿ, ಹೊಸದಾಗಿ ಪರಿಚಯವಾಗುತ್ತಿರುವುದು ಎಮೋಜಿ ಹುಡುಕುವ ಆಯ್ಕೆ. ಇದುವರೆಗೂ ಇದು ಐಒಎಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಆಂಡ್ರಾಯ್ಡ್ ಗೂ ಬರುತ್ತಿದೆ. ಈ ಎಮೋಜಿ ಹುಡುಕುವ ಐಕಾನ್ ಸ್ಕ್ರೀನ್ ಎಡಗಡೆ ಕೆಳಭಾಗದಲ್ಲಿ ಕಾಣಿಸುತ್ತದೆ.

ಸದ್ಯ ಕೆಲ ಆಂಡ್ರಾಯ್ಡ್ ಬೀಟಾ ವರ್ಷನ್ ಗಳಲ್ಲಿ ಈ ಫೀಚರ್ ಲಭ್ಯವಿದ್ದು, ಬೇಕಿದ್ದರೆ ನೀವು ಇತ್ತೀಚಿನ ವಾಟ್ಸಾಪ್ ಬೀಟಾ ವರ್ಷನ್ ಎಪಿಕೆ ಫೈಲ್ ಡೌನ್ಲೋಡ್ ಮಾಡಿಕೊಂಡು ಅಥವಾ ಪ್ಲೇಸ್ಟೋರ್ ನಲ್ಲಿ ಬೀಟಾ ಪ್ರೋಗ್ರಾಮ್ ಗೆ ಸೇರುವ ಮೂಲಕ ಬಳಸಬಹುದು. ಇಲ್ಲದಿದ್ದರೆ ಮುಂದಿನ ವಾಟ್ಸಾಪ್ ಅಪ್ಡೇಟ್ ವರೆಗೂ ಕಾಯಬೇಕು.