ಹಿಂಸೆ ಪ್ರಚೋದಿಸಿದ ಕಾಂಗ್ರೆಸ್ ನಾಯಕಿ ಮೇಲೆ ಎಫ್.ಐ.ಆರ್. |News Mirchi

ಹಿಂಸೆ ಪ್ರಚೋದಿಸಿದ ಕಾಂಗ್ರೆಸ್ ನಾಯಕಿ ಮೇಲೆ ಎಫ್.ಐ.ಆರ್.

ಭೂಪಾಲ್: ಕಳೆದ ವಾರ ಮಧ್ಯಪ್ರದೇಶದಲ್ಲಿ ನಡೆದ ರೈತರ ಪ್ರತಿಭಟನೆ ಸಂದರ್ಭದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಹಿಂಸೆಗೆ ಪ್ರಚೋದಿಸಿದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಕಾಂಗ್ರೆಸ್ ನಾಯಕಿ ಮತ್ತು ಶಾಸಕಿ ಶಕುಂತಲ ಖಟಿಕ್ ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಪೊಲೀಸ್ ತಂಡವೊಂದು ಖಟಿಕ್ ಮನೆಯ ಮೇಲೆ ದಾಳಿ ನಡೆಸಿ ಅವರಿಗಾಗಿ ಹುಡುಕಾಟ ನಡೆಸಿದ್ದು, ಅಲ್ಲಿ ಆಕೆ ಪತ್ತೆಯಾಗದ ಕಾರಣ ಪೊಲೀಸರು ಬರಿಗೈಯಲ್ಲಿ ವಾಪಸಾಗಿದ್ದಾರೆ.

ರೈತರ ಪ್ರತಿಭಟನೆ ವೇಳೆ ಪಕ್ಷದ ಕಾರ್ಯಕರ್ತರನ್ನು ಕರೇರಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವಂತೆ ಶಕುಂತಲಾ ಅವರು ಸೂಚಿಸಿರುವ ವೀಡಿಯೋ ಆಧಾರದ ಮೇಲೆ ಆಕೆಯ ಮೇಲೆ ಠಾಣಾ ಉಸ್ತುವಾರಿ ಸಂಜೀವ್ ತಿವಾರಿಯವರಿಂದ ಎಫ್.ಐ.ಆರ್. ದಾಖಲಿಸಿಕೊಳ್ಳಲಾಗಿದೆ.

  • No items.

Loading...
loading...
error: Content is protected !!