D K Shivakumar

ಸಾಕ್ಷಿ ನಾಶಕ್ಕೆ ಯತ್ನ: ಪವರ್ ಮಿನಿಸ್ಟರ್ ಗೆ ಬಂಧನದ ಭೀತಿ

ಬೆಂಗಳೂರು: ಈ ಹಿಂದೆ ನಡೆದ ಆದಾಯ ತೆರಿಗೆ ದಾಳಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಪವರ್ ಮಿನಿಸ್ಟರ್ ಗೆ ಬಂಧನದ ಭೀತಿ ಎದುರಾಗಿದೆ. ತೆರಿಗೆ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಚೀಟಿ ಹರಿಯುವ ಮೂಲಕ ಸಾಕ್ಷಿ ನಾಶಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್.ಐ.ಆರ್.ದಾಖಲಾಗಿದೆ.

ಅಂದು ಡಿ.ಕೆ.ಶಿವಕುಮಾರ್ ಅವರು ಹರಿದಿದ್ದ ಚೀಟಿಯನ್ನು ಜೋಡಿಸಿದಾಗ ಅದರಲ್ಲಿ 18 ಕೋಟಿ ರೂಪಾಯಿ ಹಣ ವರ್ಗಾವಣೆಯ ಮಾಹಿತಿಯಿದ್ದದ್ದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದೀಗ ಸಾಕ್ಷಿ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್.ಐ.ಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸಿಬಿಐ ಆರ್ಥಿಕ ಅಪರಾಧಗಳ ನ್ಯಾಯಪೀಠ ಅನುಮತಿ ನೀಡಿದೆ.

ಭಾರತದ ಆಮದು ತೆರಿಗೆಗೆ ಟ್ರಂಪ್ ಅಸಮಾಧಾನ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 22 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಡಿಕೆಶಿಗೆ ನೋಟೀಸ್ ಜಾರಿ ಮಾಡಲಾಗಿದೆ. ಬಂಧನ ಭೀತಿಯಿಂದ ಪಾರಾಗಲು ಡಿಕೆಶಿ ಜಾಮೀನಿಗಾಗಿ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

Get Latest updates on WhatsApp. Send ‘Subscribe’ to 8550851559