ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆ ಸಂಸದನ ವಿರುದ್ಧ ಎಫ್.ಐ.ಆರ್ |News Mirchi

ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆ ಸಂಸದನ ವಿರುದ್ಧ ಎಫ್.ಐ.ಆರ್

ಏರ್ ಇಂಡಿಯಾ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆದ ಮತ್ತು ವಿಮಾನ 40 ನಿಮಿಷಗಳ ಕಾಲ ತಡವಾಗಲು ಕಾರಣರಾದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರ ವಿರುದ್ಧ ಏರ್ ಇಂಡಿಯಾ ಎರಡು ಎಫ್.ಐ.ಆರ್ ದಾಖಲಿಸಿದೆ.

ಸಂಸದರು ನನ್ನ ಥಳಿಸಿ ಎಲ್ಲಾ ಸಿಬ್ಬಂದಿಯ ಎದುರು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಏರ್ ಇಂಡಿಯಾ ಸಿಬ್ಬಂದಿ ಸುಕುಮಾರ್ ಆರೋಪಿಸಿದ್ದಾರೆ. ಶಿವಸೇನೆ ಸಂಸದ ಗಾಯಕ್ವಾಡ್ ಪುಣೆಯಿಂದ ದೆಹಲಿಗೆ ಹೋಗುವವರಿದ್ದರು. ಆದರೆ ಸೀಟಿನ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬದಲಿಗೆ ಎಕಾನಮಿ ಕ್ಲಾಸ್ ಟಿಕೆಟ್ ನೀಡಿದ್ದಾರೆಂಬ ಕಾರಣಕ್ಕೆ ಸಂಸದರು ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.

Loading...
loading...
error: Content is protected !!