ಪ್ರಥಮ ಮಂಗಳಮುಖಿ ಪ್ರಿನ್ಸಿಪಾಲ್ ರಾಜೀನಾಮೆ… – News Mirchi

ಪ್ರಥಮ ಮಂಗಳಮುಖಿ ಪ್ರಿನ್ಸಿಪಾಲ್ ರಾಜೀನಾಮೆ…

ಕೋಲ್ಕತಾ: ಭಾರತದಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಮೊದಲ ಮಂಗಳ ಮುಖಿ ಮನಾಬಿ ಬಂಡೋಪಾದ್ಯಾಯ, ಆ ಜವಾಬ್ದಾರಿಯಿಂದ ಹೊರನಡೆದಿದ್ದಾರೆ. ಮೂರು ದಿನಗಳ ಹಿಂದೆ ಅವರು ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ. ಈ ವಿಷಯವನ್ನು ನಾದಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಮಿತ್ ಗುಪ್ತಾ ಬಹಿರಂಗಪಡಿಸಿದ್ದಾರೆ.

ಕೃಷ್ಣನಗರ್ ಮಹಿಳಾ ಕಾಲೇಜ್ ಪ್ರಿನ್ಸಿಪಾಲ್ ಹುದ್ದೆಗೆ ರಾಜೀನಾಮೆ ನೀಡಿದ ಮನಾಬಿ ಪತ್ರವನ್ನು ಉನ್ನತ ಶಿಕ್ಷಣ ಇಲಾಖೆಗೆ ನೀಡಿದ್ದಾಗಿ ಅವರು ಹೇಳಿದರು. ಇತ್ತೀಚೆಗೆ ಡೈರೆಕ್ಟರ್ ಆರ್.ಪಿ.ಭಟ್ಟಾಚಾರ್ಯ ಸೇರಿದಂತೆ ನಾಲ್ವರು ಅಧಿಕಾರಿಗಳ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತು. ಬೋಧಕರೊಂದಿಗೆ ಪ್ರಾಂಶುಪಾಲರಿಂದಲೂ ಅವರು ಕಾಲೇಜಿನಲ್ಲಿ ನಡೆಯುತ್ತಿರುವ ವಿಷಯಗಳನ್ನು ಕೇಳಿ ತಿಳಿದುಕೊಂಡರು. ಇದಾದ ಕೆಲ ದಿನಗಳ ನಂತರ ಮನಾಬಿ ಈ ತೀರ್ಮಾನ ಕೈಗೊಂಡಿದ್ದಾರೆ.

‘ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ, ತನ್ನ ಸಹೋದ್ಯೋಗಿಗಳೂ ಸಹಾ ನನಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಮತ್ತೊಂದು ಕಡೆ ಸ್ಟಾಫ್ ಕೂಡಾ ನನ್ನ ಮೇಲೆಯೇ ನಿಂಧನೆ ಮಾಡುತ್ತಾರೆ. ಈ ಕಿರುಕುಳವನ್ನು ಭರಿಸಲು ಆಗುತ್ತಿಲ್ಲ. ಕಾಲೇಜಿನಲ್ಲಿ ಶಾಂತಿಯುತ ವಾತಾವರಣ ಇರಬೇಕೆಂದು ನಾನು ಭಾವಿಸುತ್ತಿದ್ದರೆ, ಕೆಲವರು ಆ ಪರಿಸ್ಥಿತಿಯನ್ನು ಹದಗೆಡಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು, ಸರ್ಕಾರದಿಂದ ನನಗೆ ಸಾಕಷ್ಟು ನೆರವು ಸಿಗುತ್ತಿದೆ, ಆದರೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ನನ್ನ ಮೇಲೆ ಏಕೆ ಆಕ್ರೋಷಿತರಾಗಿದ್ದಾರೋ ತಿಳಿಯುತ್ತಿಲ್ಲ. ಈ ಮಾನಸಿಕ ಒತ್ತಡವನ್ನು ಭರಿಸುವ ಬದಲು ಹುದ್ದೆಯಿಂದ ಹೊರನಡೆಯುವುದೇ ಒಳ್ಳೆಯದು ಎಂದು ಭಾವಿಸಿ ರಾಜೀನಾಮೆ ನೀಡುತ್ತಿದ್ದೇನೆ. ಹಲವು ಕನಸುಗಳೊಂದಿಗೆ ಕಾಲೇಜಿಗೆ ಬಂದೆ. ಆದರೆ ಇಲ್ಲಿ ಯಾರ ಸಹಕಾರವೂ ಇಲ್ಲದೆ ಇರುವುದರಿಂದ ಸೋತು ಹೋಗುತ್ತಿದ್ದೇನೆ’ ಎಂದು ತಮ್ಮ ಪತ್ರದಲ್ಲಿ ಮನಾಬಿ ತಿಳಿಸಿದ್ದಾರೆ.

Loading...

Leave a Reply

Your email address will not be published.