ದಿನಕರನ್ ಕ್ಯಾಂಪ್ ನಿಂದ ಹೊರಬಂದ ಐವರು ಶಾಸಕರು? |News Mirchi

ದಿನಕರನ್ ಕ್ಯಾಂಪ್ ನಿಂದ ಹೊರಬಂದ ಐವರು ಶಾಸಕರು?

ತಮಿಳುನಾಡಿನಲ್ಲಿ ಪಳನಿಸ್ವಾಮಿ ಸರ್ಕಾರವನ್ನು ಕೆಡವಲು ಯತ್ನಿಸುತ್ತಿರುವ ದಿನಕರನ್ ಜೊತೆಗಿದ್ದ 22 ಶಾಸಕರಲ್ಲಿ ಇದೀಗ ಐವರು ಶಾಸಕರು ಪುದುಚ್ಚೇರಿ ಕ್ಯಾಂಪ್ ನಿಂದ ಹೊರಬಂದಿದ್ದಾಗಿ ತಿಳಿದುಬಂದಿದೆ. ಹೀಗಾಗಿ ಉಳಿದ ಶಾಸಕರನ್ನು ಉಳಿಸಿಕೊಳ್ಳಲು ಪುದುಚ್ಚೇರಿಯಿಂದ ಕ್ಯಾಂಪನ್ನು ಹೈದರಾಬಾದ್ ಸ್ಥಳಾಂತರಿಸಲು ದಿನಕರನ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಐದು ಜನ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲವು ಕಾರ್ಯಕ್ರಮಗಳು, ವೈಯುಕ್ತಿಕ ಕೆಲಸಗಳು ಮತ್ತು ಕುಟುಂಬ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆದಿರುವುದಾಗಿ ದಿನಕರನ್ ವರ್ಗದ ನಾಯಕರೊಬ್ಬರು ಹೇಳಿದ್ದಾರೆ. ಶೀಘ್ರದಲ್ಲಿಯೇ ಆ ಐದೂ ಶಾಸಕರು ವಾಪಸ್ ಬರುತ್ತಾರೆ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ದಿನಕರನ್ ಶಿಬಿರದಿಂದ ಹೊರಗೆ ಬಂದ ಶಾಸಕರನ್ನು ಪುನಃ ದಿನಕರನ್ ಕ್ಯಾಂಪ್ ಗೆ ಹಿಂತಿರುಗದಂತೆ ತಡೆಯಲು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕೆಲ ಸಚಿವರನ್ನು ಕಣಕ್ಕಿಳಿಸಿದ್ದಾರೆ ಎನ್ನಲಾಗಿದೆ.

Loading...
loading...
error: Content is protected !!