ಉಗ್ರರ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮ – News Mirchi

ಉಗ್ರರ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮ

ಜಮ್ಮೂ ಕಾಶ್ಮೀರ: ಪುಲ್ವಾಮಾ ಜಿಲ್ಲೆಯಲ್ಲಿ ಡಿಸ್ಟ್ರಿಕ್ ಪೊಲೀಸ್ ಲೈನ್ ಕ್ವಾರ್ಟರ್ಸ್ ಪ್ರವೇಶಿಸಿದ ಇಬ್ಬರು ಉಗ್ರರು ನಡೆಸಿದ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಎನ್ಕೌಂಟರ್ ಮುಂದುವರೆಯುತ್ತಿದ್ದು, ಒಬ್ಬ ಭಯೋತ್ಪಾದಕನನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.

ಶನಿವಾರ ಮುಂಜಾನೆ 4:30 ರ ವೇಳೆ ಉಗ್ರರು ಡಿಸ್ಟ್ರಿಕ್ಟ್ ಪೊಲೀಸ್ ಲೈನ್ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರು. ದಾಳಿಯಲ್ಲಿ ಮೂವರು ಸಿ.ಆರ್.ಪಿ.ಎಫ್ ಯೋಧರು ಮತ್ತು ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದರು. ನಂತರ ಮೂವರು ಪೊಲೀಸರು ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾಗಿ ವರದಿಯಾಗಿದೆ.

Loading...