ಗಾಳಿಯಲ್ಲೇ ವಿಮಾನ ಟಾಯ್ಲೆಟ್ ಟ್ಯಾಂಕ್ ತೆರೆದರೆ..

ನವದೆಹಲಿಯಲ್ಲಿ ಲ್ಯಾಂಡಿಂಗ್ ಆಗುವ ಸಮಯಕ್ಕೆ ಸ್ವಲ್ಪ ಮುಂಚೆಯೇ ವಿಮಾನಗಳು ತಮ್ಮ ಟಾಯ್ಲೆಟ್ ಟ್ಯಾಂಕ್ ಗಳನ್ನು ಗಾಳಿಯಲ್ಲೇ ಖಾಲಿ ಮಾಡುತ್ತಿವೆಯಂತೆ. ಹೀಗಾಗಿ ವಿಮಾನ ಟಾಯ್ಲೆಟ್ ಟ್ಯಾಂಕ್ ಗಳಲ್ಲಿನ ಮಲಮೂತ್ರಗಳು ವಿಮಾನ ನಿಲ್ದಾಣದ ಸಮೀಪದ ಮನೆಗಳ ಮೇಲೆ ಬೀಳುತ್ತಿದೆಯಂತೆ. ಹೀಗೆ ಗಾಳಿಯಲ್ಲೇ ಟ್ಯಾಂಕ್ ಖಾಲಿ ಮಾಡಿದ ವಿಮಾನಯಾನ ಸಂಸ್ಥೆಯೊಂದಕ್ಕೆ ರು.50 ಸಾವಿರ ದಂಡ ವಿಧಿಸಿದೆ ಗ್ರೀನ್ ಟ್ರಿಬ್ಯುನಲ್.

ಇನ್ನು ಮುಂದೆ ಯಾರಾದರೂ ಹೀಗೆ ಮಾಡಿದರೆ ಕೂಡಲೇ ಪರಿಹಾರವಾಗಿ ರೂ. 50 ಸಾವಿರ ದಂಡವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಗ್ರೀನ್ ಟ್ರಿಬ್ಯುನಲ್ ಆದೇಶಿಸಿದೆ.

ದೆಹಲಿಯಲ್ಲಿನ ಇಂಧಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಮನೆಗಳ ಮೇಲೆ ಮಲಮೂತ್ರಗಳು ಬೀಳುತ್ತಿವೆ ಎಂದು ಲೆಫ್ಟಿನೆಂಟ್ ಜನರಲ್(ನಿವೃತ್ತ) ಸತ್ವಂಗ್ ಸಿಂಗ್ ದಹಿಯಾ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಎನ್‌ಜಿ‌ಟಿ ಚೇರ್‌ಪರ್ಸನ್ ಸ್ವತಂತ್ರ ಕುಮಾರ್, ಹಲವು ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ವಿಮಾನಗಳು ಲ್ಯಾಂಡ್ ಆದ ನಂತರ ಗ್ರೌಂಡ್ ಸಿಬ್ಬಂದಿ ಬಂದು ಆ ವಿಮಾನಗಳ ಟಾಯ್ಲೆಂಟ್ ಟ್ಯಾಂಕ್ ಕ್ಲೀನ್ ಮಾಡುತ್ತಾರೆ. ಆದರೆ ಕೆಲ ಸಂದರ್ಭಗಳಲ್ಲಿ ಮಾತ್ರ ವಿಮಾನ ಆಗಸದಲ್ಲಿದ್ದಾಗಲೆ ಟ್ಯಾಂಕುಗಳು ಲೀಕ್ ಆಗುತ್ತವೆ. ಯಾವುದೇ ಸಂದರ್ಭಗಳಲ್ಲಿಯೂ ಏರ್‌ಪೋರ್ಟ್ ಸಮೀಪ ಆಗಸದಲ್ಲಿದ್ದಾಗಲೇ ಟಾಯ್ಲೆಟ್ ಟ್ಯಾಂಕ್ ಕ್ಲೀನ್ ಮಾಡಬಾರದೆಂದು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಬೇಕು ಎಂದು ಡಿಜಿಸಿಎ ಗೆ ಗ್ರೀನ್ ಟ್ರಿಬ್ಯುನಲ್ ಹೇಳಿದೆ.