ದುಬಾರಿ ಕಾರುಗಳಿಗೆ ಹೆಚ್ಚುವರಿ ಸೆಸ್, 30 ವಸ್ತುಗಳ ಮೇಲಿನ ತೆರಿಗೆ ಕಡಿತ |News Mirchi

ದುಬಾರಿ ಕಾರುಗಳಿಗೆ ಹೆಚ್ಚುವರಿ ಸೆಸ್, 30 ವಸ್ತುಗಳ ಮೇಲಿನ ತೆರಿಗೆ ಕಡಿತ

ಮಧ್ಯಮ ಗಾತ್ರದ ಕಾರುಗಳು, ಐಷಾರಾಮಿ ಕಾರುಗಳು ಮತ್ತು ಸ್ಪೋರ್ಟ್ಸ್ ಕಾರುಗಳಿಗೆ ಹೆಚ್ಚುವರಿ ಸೆಸ್ ವಿಧಿಸಲು ಸರಕು ಸೇವಾ ತೆರಿಗೆ ಕೌನ್ಸಿಲ್ ನಿರ್ಧರಿಸಿದೆ. ಮಧ್ಯಮ ಗಾತ್ರದ ಕಾರುಗಳ ಮೇಲೆ ಶೇ.2 ಮತ್ತು ಲಗ್ಸುರಿ ಕಾರುಗಳ ಮೇಲೆ ಶೇ.5 ಮತ್ತು ಎಸ್.ಯು.ವಿ ಗಳ ಮೇಲೆ ಶೇ.7 ರಷ್ಟು ಹೆಚ್ಚುವರಿ ಸೆಸ್ ವಿಧಿಸಲು ನಿರ್ಧರಿಸಲಾಗಿದೆ ಎಂದು ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಜಿಎಸ್ಟಿ ಜಾರಿಗೆ ಬಂದ ನಂತರ ಮಧ್ಯಮ ಗಾತ್ರ ಕಾರುಗಳು, ದುಬಾರಿ ಕಾರುಗಳ ಮೇಲಿನ ತೆರಿಗೆ ದರ ಶೇ.48 ರಿಂದ ಶೇ.43ಕ್ಕೆ ಇಳಿದಿತ್ತು. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೇಟ್ಲಿ ವಿವರಿಸಿದರು. ಆದರೆ ಈ ಹೊಸ ತೆರಿಗೆ ದರ ಯಾವಾಗ ಜಾರಿಗೆ ಬರುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಸಣ್ಣ ಮತ್ತು ಹೈಬ್ರಿಡ್ ಕಾರುಗಳ ಮೇಲೆ ಯಾವುದೇ ಹೆಚ್ಚುವರಿ ಸೆಸ್ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಜಿಎಸ್ಟ್ ಜಾರಿಗೆ ಬಂದ ನಂತರ ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಗ್ರಾಹಕರು ಪಡೆಯುತ್ತಿದ್ದ ಶೇ.3 ರಷ್ಟು ತೆರಿಗೆ ಲಾಭವನ್ನು ಇನ್ನು ಮುಂದೆಯೂ ಪಡೆಯಲಿದ್ದಾರೆ ಎಂದು ಜೇಟ್ಲಿ ಹೇಳಿದರು.

ಇದರ ಜೊತೆಗೆ ಸುಮಾರು 30 ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಕಡಿತಗೊಳಿಸಲಾಗಿದೆ. ಹುಣಸೇಹಣ್ಣು, ಧೂಪ, ಪ್ಲಾಸ್ಟಿಕ್ ರೈನ್ ಕೋಟ್, ರಬ್ಬರ್ ಬ್ಯಾಂಡ್, ಕಂಪ್ಯೂಟರ್ ಮಾನಿಟರ್, ಅಡುಗೆ ಮನೆಯಲ್ಲಿ ಬಳಸುವ ಗ್ಯಾಸ್ ಲೈಟರ್, ಪೊರಕೆ, ಬ್ರಶ್ ಮುಂತಾದವುಗಳ ಜಿಎಸ್ಟಿ ದರದಲ್ಲಿ ಇಳಿಕೆ ಮಾಡಲಾಗಿದೆ.

English Summary:

Finance Minister Arun Jaitley said that The Goods and Services Tax Council on Saturday decided to levy additional cess on medium sized cars, Luxury cars and Sport cars and lowered the GST rate on 30 items. An extra 2% cess will be demanded on medium sized cars, 5% on Luxury cars and 7% on SUVs.

Loading...
loading...
error: Content is protected !!