ಕೇಜ್ರಿವಾಲ್ ಪ್ರಚಾರಕ್ಕೆ ಸರ್ಕಾರದ ಹಣ ದುರುಪಯೋಗ, ಆಮ್ ಆದ್ಮಿ ಪಕ್ಷವೇ ರೂ.97 ಕೋಟಿ ಪಾವತಿಸಬೇಕು – News Mirchi

ಕೇಜ್ರಿವಾಲ್ ಪ್ರಚಾರಕ್ಕೆ ಸರ್ಕಾರದ ಹಣ ದುರುಪಯೋಗ, ಆಮ್ ಆದ್ಮಿ ಪಕ್ಷವೇ ರೂ.97 ಕೋಟಿ ಪಾವತಿಸಬೇಕು

ಸಾರ್ವಜನಿಕರ ಹಣವನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಜಾಹೀರಾತುಗಳಿಗೆ ತಮ್ಮ ಇಷ್ಟಾನುಸಾರ ಕೇಜ್ರಿವಾಲ್ ಮತ್ತು ಪಕ್ಷದ ವೈಭವೀಕರಣಕ್ಕಾಗಿ ಖರ್ಚು ಮಾಡಿರುವ ಕೇಜ್ರಿವಾಲ್ ಸರ್ಕಾರಕ್ಕೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಬಿಸಿ ಮುಟ್ಟಿಸಿದ್ದಾರೆ. ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಸೇರಿದಂತೆ ತಮ್ಮ ಪಕ್ಷ ಮತ್ತು ಕೇಜ್ರಿವಾಲ್ ಕುರಿತು ಪ್ರಚಾರದ ಜಾಹೀರಾತುಗಳಿಗೆ ದೆಹಲಿ ಸರ್ಕಾರ ವೆಚ್ಚ ಮಾಡಿದ್ದ ರೂ.97 ಕೋಟಿ ಹಣವನ್ನು ಪಾವತಿಸುವಂತೆ ಆಮ್ ಆದ್ಮಿ ಪಕ್ಷಕ್ಕೆ ಸೂಚಿಸಿದ್ದಾರೆ

ಜಾಹೀರಾತು ಕಂಪನಿಗಳಿಗೆ ಪಾವತಿಸಬೇಕಿದ್ದ ರೂ.97 ಕೋಟಿಯಲ್ಲಿ ರೂ. 42 ಕೋಟಿಯನ್ನು ಸರ್ಕಾರ ಈಗಾಗಲೇ ಪಾವತಿಸಿದೆ. ಈ ಹಣವನ್ನು ಕೂಡಲೇ ಆಮ್ ಆದ್ಮಿ ಪಕ್ಷದಿಂದ ವಸೂಲಿ ಮಾಡುವಂತೆ ಪ್ರಧಾನ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ಜಾಹೀರಾತು ಕಂಪನಿಗಳಿಗೆ ಬಾಕಿ ಪಾವತಿಸಬೇಕಿರುವ ರೂ.55 ಕೋಟಿಯನ್ನೂ ಅಮ್ ಆದ್ಮಿ ಪಕ್ಷವೇ ಪಾವತಿಸಬೇಕೇ ಹೊರತು ಸರ್ಕಾರವಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್ ಅವರ ದೂರಿನ ಹಿನ್ನೆಲೆಯಲ್ಲಿ ಜಾಹೀರಾತುಗಳಿಗೆ ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡ ಆರೋಪದ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿತ್ತು. ಮೂರು ದಿನಗಳ ಹಿಂದೆ ಈ ಸಮಿತಿ, ಜಾಹೀರಾತುಗಳಿಗೆ ಕೇಜ್ರಿವಾಲ್ ಸರ್ಕಾರ ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡಿದೆ ಎಂಬ ತೀರ್ಮಾನಕ್ಕೆ ಬಂದಿತ್ತು.

Loading...

Leave a Reply

Your email address will not be published.