ಟ್ವಿಟರ್ ಪಾಲಿಗೆ ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ

ಟ್ವಿಟರ್ ಪಾಲಿಗೆ ಭಾರತವು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಸಾಮಾಜಿಕ ಮಾಧ್ಯಮದ ದಿಗ್ಗಜ ಟ್ವಿಟರ್ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತದೆ ಎಂದು ಟ್ವಿಟರ್ ಇಂಡಿಯಾ ನಿರ್ದೇಶಕ ತರಣ್ ಜೀತ್ ಸಿಂಗ್ ಹೇಳಿದ್ದಾರೆ.

ಟಿವಿ18 ನೆಟ್ವರ್ಕ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ತರಣ್ ಜೀತ್, ಟ್ವಿಟರ್ ಇಂಡಿಯಾದ 2017 ರ ರಿವ್ಯೂ ರಿಪೋರ್ಟ್ ಬಗ್ಗೆ ವಿವರಿಸಿದ್ದು, ಈ ವರ್ಷದಲ್ಲಿ ಸರಕು ಸೇವಾ ತೆರಿಗೆ(ಜಿಎಸ್ಟಿ) ಮತ್ತು ನೋಟು ರದ್ದು ಕ್ರಮ ವಿಷಯಗಳು ಈ ವರ್ಷ ಟ್ವಿಟರ್ ನಲ್ಲಿ ಹೆಚ್ಚು ಟ್ವೀಟ್ ಆದ ಪ್ರಮುಖ ವಿಷಯಗಳು ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಭಾರತವು ಬಹಳ ಬೇಗವಾಗಿ ಬೆಳೆಯುತ್ತಿರುವ ದೇಶವಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತವು ತುಂಬಾ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು. ನಾವು ನಿರಂತರವಾಗಿ ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಇತ್ತೀಚೆಗಷ್ಟೇ ಕಡಿಮೆ ಬ್ಯಾಂಡ್ ವಿಡ್ತ್ ನಲ್ಲಿ ಬಳಸುವ ಸ್ಮಾರ್ಟ್ ಫೋನ್ ಗಳಲ್ಲೂ ಟ್ವಿಟರ್ ಬಳಸಲು ಅನುಕೂಲವಾಗುವಂತೆ ಟ್ವಿಟರ್ ಲೈಟ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.

Get Latest updates on WhatsApp. Send ‘Subscribe’ to 8550851559