ಸುಳ್ಳು ಹೆಸರು ಹೇಳಿ ಮದುವೆ, ಮತಾಂತರ ಮಾಡಿ ಮಾರಲು ಯತ್ನ: ಮೋಸ ಹೋದ ಯುವತಿ ಬಿಚ್ಚಿಟ್ಟ ಸತ್ಯ |News Mirchi

ಸುಳ್ಳು ಹೆಸರು ಹೇಳಿ ಮದುವೆ, ಮತಾಂತರ ಮಾಡಿ ಮಾರಲು ಯತ್ನ: ಮೋಸ ಹೋದ ಯುವತಿ ಬಿಚ್ಚಿಟ್ಟ ಸತ್ಯ

ಕೇರಳದಲ್ಲಿ ಐಎಸ್ಐಎಸ್ ಭಯೋತ್ಪಾದಕ ಸಂಘಟನೆ ಯಾವ ಮಟ್ಟಕ್ಕೆ ಬೇರೂರಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಲವ್ ಜಿಹಾದ್ ಹೆಸರಿನಲ್ಲಿ ಕೇರಳದಲ್ಲಿ ಯುವತಿಯನ್ನು ಮದುವೆಯಾಗಿ, ಸೌದಿ ಅರೇಬಿಯಾಗೆ ಕರೆದೊಯ್ದು, ಅಲ್ಲಿಂದ ಐಎಸ್ ಉಗ್ರರಿಗೆ ಲೈಂಗಿಕ ಗುಲಾಮಳನ್ನಾಗಿ ಮಾರುವ ಪ್ರಯತ್ನದ ಪಾಶವೀ ಕೃತ್ಯ ಬೆಳಕಿಗೆ ಬಂದಿದೆ. ಮೋಸ ಹೋದ ಯುವತಿ ತನ್ನ ಅಳಲನ್ನು ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿದ್ದಾಳೆ.

ನನ್ನ ವಂಚಿಸಿ ಮದುವೆಯಾಗಿ, ನಂತರ ನನ್ನನ್ನು ಮತಾಂತರ ಮಾಡಿದರು. ನನ್ನನ್ನು ಸೆಕ್ಸ್ ಸ್ಲೇವ್ ಆಗಿ ಮಾರುವ ಪ್ರಯತ್ನವನ್ನು ಮಾಡಿದ. ನನಗೆ ನ್ಯಾಯ ಕೊಡಿಸಿ ಎಂದು 25 ವರ್ಷದ ಯುವತಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾಳೆ. ನನ್ನನ್ನು ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ಆಕೆ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದಾಳೆ. ಕೇರಳದ ಯುವತಿ ಗುಜರಾತ್ ನ ಜಾಮ್ ನಗರದಲ್ಲಿ ಬೆಳೆದಿದ್ದಳು. ಅದೇ ಸಮಯದಲ್ಲಿ ಅಲ್ಲಿ ಪರಿಯಚವಾದ ವ್ಯಕ್ತಿಯೊಬ್ಬ ನಕಲಿ ಆಧಾರ್ ಕಾರ್ಡ್, ನಕಲಿ ವಿವರಗಳೊಂದಿಗೆ ತನ್ನನ್ನು ಮದುವೆಯಾಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಮದುವೆಯಾದ ನಂತರ ಆತ ಮುಸ್ಲಿಂ ಎಂದು, ಆತನ ಹೆಸರು ಮೊಹಮದ್ ರಿಯಾಜ್ ಎಂದು ತಿಳಿದು ಬಂತು ಎಂದು ಯುವತಿ ಹೇಳಿದ್ದಾಳೆ. ಮದುವೆಯ ನಂತರ ನನ್ನ ಬೆತ್ತಲೆ ಫೋಟೋ, ವೀಡಿಯೋ ತೆಗೆದು ಸೌದಿ ಅರೇಬಿಯಾಗೆ ಬರಬೇಕು, ಇಲ್ಲವಾದರೆ ಫೋಟೋ, ವೀಡಿಯೋಗಳನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿವುದಾಗಿ ಹೆದರಿಸಿದ ಎಂದು ಕಣ್ಣೀರಾಗಿದ್ದಾಳೆ ಯುವತಿ.

ಸೌದಿ ಅರೇಬಿಯಾ ತಲುಪಿದ ನಂತರ ಒತ್ತಾಯಪೂರ್ವಕವಾಗಿ ಮತಾಂತರ ಮಾಡಿ, ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯಕ್ ಭಾಷಣಗಳು, ವೀಡಿಯೋಗಳನ್ನು ನೋಡಲು ಬಲವಂತ ಮಾಡುತ್ತಿದ್ದ ಎಂದು ಯುವತಿ ನ್ಯಾಯಾಲಯದ ಎದುರು ಹೇಳಿದ್ದಾಳೆ. ನನ್ನನ್ನು ಸೌದಿ ಅರೇಬಿಯಾದಿಂದ ಸಿರಿಯಾಗೆ ಕರೆದೊಯ್ದು, ಅಲ್ಲಿನ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರಿಗೆ ಮಾರುವ ಪ್ರಯತ್ನ ಮಾಡುತ್ತಿದ್ದ. ಇದನ್ನು ಅರಿತು ಭಯದಿಂದ ನಡುಗಿ ಹೋಗಿದ್ದೆ. ಸೌದಿ ಅರೇಬಿಯಾದಲ್ಲಿ ಅನಿರೀಕ್ಷಿತವಾಗಿ ತನಗೆ ಇಂಟರ್ನೆಟ್ ಸಂಪರ್ಕ ಲಭಿಸಿದ್ದರಿಂದ ಪೋಷಕರೊಂದಿಗೆ ಮಾತನಾಡಿದೆ, ಅವರ ನೆರವಿನಿಂದ ಅಲ್ಲಿಂದ ಸುರಕ್ಷಿತವಾಗಿ ಅಹಮದಾಬಾದ್ ತಲುಪಿದ್ದಾಗಿ ಯುವತಿ ಹೇಳಿದ್ದಾಳೆ. ಸದ್ಯ ನಾನು ಎಷ್ಟು ಹೆದರಿದ್ದೇನೆ ಎಂದರೆ, ಕೇರಳದಲ್ಲಿ ಹೆಜ್ಜೆಯಿಡಲೂ ಭಯವಾಗುತ್ತಿದೆ ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!