ನಾವೂ ಕಡಿಮೆಯಿಲ್ಲ, ವಿದೇಶೀಯರಿಗೆ ವೀಸಾ ಶುಲ್ಕ ಹೆಚ್ಚಳ – News Mirchi

ನಾವೂ ಕಡಿಮೆಯಿಲ್ಲ, ವಿದೇಶೀಯರಿಗೆ ವೀಸಾ ಶುಲ್ಕ ಹೆಚ್ಚಳ

ಇತ್ತೀಚೆಗೆ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ದೇಶಗಳು ವೀಸಾ ನಿಯಮಗಳನ್ನು ಕಠಿಣಗೊಳಿಸಿ ಭಾರತೀಯರಿಗೆ ಆತಂಕ ಹುಟ್ಟಿಸಿವೆ. ಇದೀಗ ಭಾರತ ಇದಕ್ಕೆ ಸರಿಯಾದ ಉತ್ತರ ನೀಡುತ್ತಿದೆ. ಭಾರತಕ್ಕೆ ಭೇಟಿ ನೀಡುವ ವಿದೇಶೀಯರಿಗೂ ವಿವಿಧ ಕ್ಯಾಟಗೆರಿಗಳ ವೀಸಾ ಶುಲ್ಕಗಳನ್ನು ಶೇ.50 ರವರೆಗೆ ಹೆಚ್ಚಳ ಮಾಡಿದೆ.

ತಾತ್ಕಾಲಿಕ ಉದ್ಯೋಗ ನಿಮಿತ್ತ ಬರುವವರಿಗೂ ಈ ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ. ಅಮರಿಕಾ, ಕೆನಡಾ ಯು.ಕೆ, ಇಸ್ರೇಲ್, ಇರಾನ್, ಯುಎಇ ಮುಂತಾದ ದೇಶಗಳಿಗೆ ಈಗಾಗಲೇ ವಿವಿಧ ಕ್ಯಾಟಗರಿಗಳಲ್ಲಿ ಭಾರತ ಈಗಾಗಲೇ ವೀಸಾ ಶುಲ್ಕ ಹೆಚ್ಚಳ ಮಾಡಿದೆ.

ಸರ್ಕಾರಿ ನೋಟಿಫಿಕೇಷನ್ ಪ್ರಕಾರ ಒಂದು ವರ್ಷದ ಅವಧಿಗೆ ವಿದೇಶೀಯರ ವೀಸಾಗಳಿಗೆ ಈ ಹಿಂದೆ ಇದ್ದ 100 ಡಾಲರ್ ಶುಲ್ಕವನ್ನು 153 ಡಾಲರ್ ಗಳಿಗೆ ಏರಿಸಲಾಗಿದೆ. ಅಂದರೆ ಭಾರತೀಯ ಕರೆನ್ಸಿ ಪ್ರಕಾರ 6450 ರೂಪಾಯಿಗಳಿಂದ 9868 ರೂಪಾಯಿಗಳಿಗೆ ಹೆಚ್ಚಳವಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಐದು ವರ್ಷಗಳವರೆಗಿನ ಅವಧಿಯ ವೀಸಾಗಳಿಗೆ 19,736 ರೂಪಾಯಿ ಪಾವತಿಸಬೇಕು. ಯುಕೆ ಪ್ರವಾಸಿಗಳಿಗೆ ಮಾತ್ರ ಒಂದು ವರ್ಷದ ಅವಧಿಯ ವೀಸಾಗಳಿಗೆ 162 ಡಾಲರ್ ಗಳಿಂದ 248 ಡಾಲರ್ ಗಳಿಗೆ ಹೆಚ್ಚಳವಾಗುತ್ತಿದೆ. ಕೆನಡಾ, ಐರ್ಲ್ಯಾಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಥಾಯ್ಲೆಂಡ್ ದೇಶಗಳು 5 ವರ್ಷಗಳ ಉದ್ಯೋಗ ವೀಸಾಗಳಿಗೆ 300 ಡಾಲರ್ ಗಳಿಗೆ ಬದಲಾಗಿ 459 ಡಾಲರ್ ಗಳು ಪಾವತಿಸಬೇಕು.

Contact for any Electrical Works across Bengaluru

Loading...
error: Content is protected !!