ಮಾಜಿ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರ ದೂರು

***

ಗುರುಗ್ರಾಮ್: ದೆಹಲಿಯ ಬಿಜೆಪಿ ಮಾಜಿ ಶಾಸಕ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳಕ್ಕೆ ಮುಂದಾಗಿ ಜೈಲು ಪಾಲಾಗಿದ್ದಾರೆ. ಅವರ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 376, 328, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಮಾಜಿ ಶಾಸಕ ವಿಜಯ್ ಜಾಲಿಯವರನ್ನು ಭೇಟಿ ಮಾಡಲು ಹೋಗಿದ್ದ ತನಗೆ ಗುರ್ಗಾವ್ ನ ಅಪ್ನೋ ಪುರ್ ಎಂಬ ರೆಸಾರ್ಟ್ ನಲ್ಲಿ ಈ ತಿಂಗಳು(ಫೆಬ್ರವರಿ) 10 ರಂದು ತಂಪು ಪಾನೀಯದೊಳಗೆ ಮತ್ತು ಬರುವ ಪದಾರ್ಥ ಬೆರೆಸಿ ನೀಡಿದ್ದಲ್ಲದೇ ಡ್ರಗ್ಸ್ ಸೇವಿಸಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಆರಂಭಿಸಿದ್ದಾರೆ. ಅಷ್ಟರಲ್ಲಿ ಆ ಮಹಿಳೆಯ ಮೇಲೂ ವಿಜಯ್ ಜಾಲಿ ಕೇಸು ದಾಖಲಿಸಿದ್ದಾರೆ. ತನ್ನ ಮೇಲೆ ಉದ್ದೇಶಪೂರ್ವಕವಾಗಿ ಆ ಮಹಿಳೆ ದೂರು ನೀಡಿ ಬೆದರಿಸುತ್ತಿದ್ದಾಳೆ, ಆಕೆ ಹೇಳಿದ್ದೆಲ್ಲವೂ ಸುಳ್ಳು ಎಂದು ಆರೋಪಿಸಿ ಮಾಧ್ಯಮಗಳಿಗೆ ಹೇಳಿದ್ದಾರೆ. ಆಕೆ ಮೊದಲು ತನ್ನನ್ನು ಬೆದರಿಸಿದ್ದಳು, ಅದಕ್ಕೆ ಬಗ್ಗದ ಕಾರಣ ಲೈಂಗಿಕ ಕಿರುಕುಳ ಆರೋಪ ಮಾಡಿರುವುದಾಗಿ ಆರೋಪಿಸಿದ್ದಾಳೆ ಎಂದು ದೂರಿದ್ದಾರೆ.