ಸಿಬಿಐನ ಹೊಸ ಮುಖ್ಯಸ್ಥರಾಗಿ ಅಲೋಕ್ ವರ್ಮಾ

ನವದೆಹಲಿ: ದೆಹಲಿಯ ಮಾಜಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಬುಧವಾರ ಸಿಬಿಐನ 25 ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 1979 ಬ್ಯಾಚ್ ನ ಐಪಿಎಸ್ ಅಧಿಕಾರಿ ವರ್ಮಾ ಅವರು ತಮ್ಮ 37 ವರ್ಷಗಳ‌ ವೃತ್ತಿಜೀವನದಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ವರ್ಮಾ ರವರು ರಾಜನಾಥ್ ಸಿಂಗ್ ರವರನ್ನು ಭೇಟಿ ಮಾಡಿದರು. ಹೊಸ ದೆಹಲಿ ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್ ಸಹಾ ರಾಜನಾಥ್ ರವರನ್ನು ಭೇಟಿ ಮಾಡಿದರು.

ನ್ಯಾಯೋಚಿತ ಮತ್ತು ನಿಷ್ಪಕ್ಷಪಾತ ಮತ್ತು ನಿರ್ಣಾಯಕ ತನಿಖೆಯೇ ನನ್ನ ಆಧ್ಯತೆ ಎಂದು ವರ್ಮಾ ಹೇಳಿದ್ದಾರೆ.

ದೆಹಲಿ ಪೊಲೀಸ್ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೂ ಮೊದಲು ದೆಹಲಿ ಕಾರಾಗೃಹದ ಡೈರೆಕ್ಟರ್ ಜನರಲ್, ಮಿಜೋರಾಂ ಪೊಲೀಸ್ ಮಹಾನಿರ್ದೇಶಕ, ಪುದುಚೇರಿಯ ಡಿಜಿಪಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.

English Summary: Former Delhi Police commissioner Alok Verma on Wednesday took over the reins of Central Bureau of Investigation becoming the 25th chief of the agency.

Loading...

Leave a Reply

Your email address will not be published.

error: Content is protected !!