ಪಾಕ್ ಮಾಜಿ ಯೋಧನ ಬಂಧನ

ಜಮ್ಮು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯನ್ನು ದಾಟಿ ದೇಶದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಒಬ್ಬ ಮಾಜಿ ಸೈನಿಕನನ್ನು ಬಿಎಸ್ಎಫ್ ಬಂಧಿಸಿದೆ.

ನಿನ್ನೆ ಸೆರೆ ಸಿಕ್ಕಿದ ವ್ಯಕ್ತಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಮದ್(65) ಎಂದು ಗುರುತಿಸಲಾಗಿದ್ದು, ಈತ ಪಾಕ್ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ರಾತ್ರಿ ಬಿಎಸ್ಎಫ್ ಪಡೆ ಪಾಕಿಸ್ತಾನದ ಕಡೆಯಿಂದ ಅನುಮಾನಾಸ್ಪದ ಚಲನವಲನವನ್ನು ಗುರುತಿಸಿತ್ತು, ನಂತರ ಕೆಲ ಸುತ್ತು ಗುಂಡು ಹಾರಿಸಿದರು. ಸ್ವಲ್ಪ ಸಮಯದ ನಂತರ ಬಿಎಸ್ಎಫ್ ಯೋಧನೊಬ್ಬ ಭಾರತದ ಕಡೆಯ ಬೇಲಿಯ ಮುಂದೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆ ಹಚ್ಚಿದರು. ನಂತರ ಅ ವ್ಯಕ್ತಿಯನ್ನು ಶರಣಾಗುವಂತೆ ಮಾಡಲಾಯಿತು ಎಂದು ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!