ಅಮೆರಿಕದಲ್ಲಿ ನೆಲಕ್ಕುರುಳಿದ ವಿಮಾನ, ನಾಲ್ವರು ಸಜೀವ ದಹನ – News Mirchi

ಅಮೆರಿಕದಲ್ಲಿ ನೆಲಕ್ಕುರುಳಿದ ವಿಮಾನ, ನಾಲ್ವರು ಸಜೀವ ದಹನ

ನೆವಡಾ: ಅಮೆರಿಕದಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಾಲ್ವರ ಸಾವನ್ನಪ್ಪಿದ್ದಾರೆ. ಉತ್ತರ ಕೆನಡಾದ ನೆವಡಾದಲ್ಲಿನ ಏರ್ ಆಂಬ್ಯುಲೆನ್ಸ್ ವಿಮಾನ ನೆಲಕ್ಕುರುಳಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಎರಡು ಇಂಜಿನ್ ಉಳ್ಳ ಈ ವಿಮಾನ ಕ್ಯಾಸಿನೋ ಸಮೀಪದ ಖಾಸಗಿ ಮೈನಿಂಗ್ ಕಂಪನಿಗೆ ಸೇರಿದ ಪಾರ್ಕಿಂಗ್ ಪ್ರದೇಶದಲ್ಲಿ ನೆಲಕ್ಕುರುಳಿದೆ. ಹೀಗಾಗಿ ಒಮ್ಮೆಲೇ ಬೆಂಕಿ ವ್ಯಾಪಿಸಿದ್ದು ರೋಗಿಯೊಂದಿಗೆ ವಿಮಾನದಲ್ಲಿದ್ದ ಇತರ ಮೂವರು ಸಿಬ್ಬಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾರೆ. ತಾಂತ್ರಿಕ ದೋಷದಿಂದಲೇ ವಿಮಾನ ನೆಲಕ್ಕುರುಳಿದೆ ಎನ್ನಲಾಗುತ್ತಿದೆ.

Loading...

Leave a Reply

Your email address will not be published.