ನಾಲ್ವರು ನಕ್ಸಲರ ಶರಣಾಗತಿ

ಚಿಕ್ಕಮಗಳೂರು: ಸೋಮವಾರ ನಾಲ್ವರು ಪೊಲೀಸರ ಎದುರು ಶರಣಾಗಿದ್ದಾರೆ. ನಕ್ಸಲರಾದ ನೀಲಗುಣಿ ಪದ್ಮನಾಭ, ಭಾರತಿ ದಂಪತಿಗಳೊಡನೆ ರಿಜ್ವಾನಾ ಬೇಗಂ ಅಲಿಯಾಸ್ ಕಲ್ಪನ, ಪರಶುರಾಮ ದಂಪತಿಗಳು ಜಿಲ್ಲಾಧಿಕಾರಿ ಸತ್ಯವತಿ ಮತ್ತು ಎಸ್ಪಿ ಅಣ್ಣಾಮಲೈ ಎದುರು ನಕ್ಸಲರ ಮತ್ತು ಪುನರ್ವಸತಿ ಕಲ್ಪಿಸುವ ರಾಜ್ಯ ಸಮಿತಿ ಸದಸ್ಯೆ ರವರ ಜೊತೆ ಆಗಮಿಸಿ ಶರಣರಾದರು.

ನೀಲಗುಣಿ ಪದ್ಮನಾಭ ವಿರುದ್ಧ ಶಸ್ತ್ರಾಸ್ತ್ರಗಳ ಅಕ್ರಮ ಸಾಗಾಟ, ದಾಳಿ, ಸ್ಪೋಟಕ ಪದಾರ್ಥಗಳ ಬಳಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ 19 ಪ್ರಕರಣಗಳು ಮತ್ತು ರಿಜ್ವಾನಾ ಬೇಗಂ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು.

ಭಾರತಿ, ಪರಶುರಾಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಿದ್ದರೂ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪದ್ಮನಾಭನ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಹಾಗೆಯೇ ರಿಜ್ವಶನಾ, ಭಾರತಿ ಅವರ ಸುಳಿವು ನೀಡಿದವರಿಗೆ ತಲಾ ಒಂದು ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಪದ್ಮನಾಭ ಮತ್ತು ರಿಜ್ವಾನಾ ಬೇಗಂಳನ್ನು ಪೊಲೀಸರು ವಶಕ್ಕೆ ಪಡೆದು ಕಪ್ಪಳ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಇಬ್ಬರನ್ನೂ ನ್ಯಾಯಾಂಗ ವಶಕ್ಕೆ ನೀಡಿದರು.

Related News

loading...
error: Content is protected !!