ಎಸ್‌ಬಿ‌ಐ ಗ್ರಾಹಕರು ಈಗ ಪಡೆಯಬಹುದು ಉಚಿತ ಕ್ರೆಡಿಟ್ ಕಾರ್ಡ್ – News Mirchi

ಎಸ್‌ಬಿ‌ಐ ಗ್ರಾಹಕರು ಈಗ ಪಡೆಯಬಹುದು ಉಚಿತ ಕ್ರೆಡಿಟ್ ಕಾರ್ಡ್

ಮುಂಬೈ: ಕ್ರೆಡಿಟ್ ಕಾರ್ಡ್ ಬಯಸುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಹಿ ಸುದ್ದಿ ನೀಡಿದೆ. ತನ್ನ ಗ್ರಾಹಕರಿಗೆ ಉಚಿತ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಪ್ರಕಟಿಸಿದ್ದಾರೆ. ಖಾತೆಯಲ್ಲಿ ರೂ.20 ರಿಂದ 25 ಸಾವಿರವರೆಗೂ ಉಳಿಸುತ್ತಿರುವ ಗ್ರಾಹಕರು ಈ ಉಚಿತ ಕ್ರೆಡಿಟ್ ಕಾರ್ಡ್ ಪಡೆಯಬಹುದು, ನಾಲ್ಕು ವರ್ಷಗಳ ವರೆಗೂ ಯಾವುದೇ ವಾರ್ಷಿಕ ಶುಲ್ಕವೂ ಇರುವುದಿಲ್ಲವೆಂದು ಅವರು ಹೇಳಿದ್ದಾರೆ.

ಡಿಜಿಟಲ್ ಇಂಡಿಯಾದ ಭಾಗವಾಗಿ ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸಲು “ಉನ್ನತಿ” ಎಂಬ ಯೋಜನೆ ಮೂಲಕ ಈ ಉಚಿತ ಕ್ರೆಡಿಟ್ ಕಾರ್ಡ್ ಗಳನ್ನು ಜಾರಿ ಮಾಡುತ್ತಿರುವುದಾಗಿ ಅವರು ಹೇಳಿದರು. ಗ್ರಾಹಕರ ಕ್ರಿಡಿಟ್ ಹಿಸ್ಟರಿ ಜೊತೆ ಸಂಬಂಧವಿಲ್ಲದೆ ಖಾತೆಯಲ್ಲಿ ರೂ.20 ರಿಂದ 25 ಸಾವಿರದವರೆಗೂ ಬ್ಯಾಲೆನ್ಸ್ ಉಳಿಸಿಕೊಂಡು ಹೋಗುತ್ತಿರುವವರಿಗೆ ಈ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಾರೆ.

ಇತ್ತೀಚೆಗೆ ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು ಎಂದು ಪ್ರಕಟಿಸಿದ್ದ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದವು‌. ನಮ್ಮ ಹಣದ ಮೇಲೆ ನಿಮ್ಮ ಸವಾರಿ ಏನು ಎಂದು ಜನ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಹಕರು ಯಾರ ಒತ್ತಡವೂ ಇಲ್ಲದೆ ತಾವಾಗಿಯೇ ಖಾತೆಗಳಲ್ಲಿ ಬ್ಯಾಲೆನ್ಸ್ ಉಳಿಸಿಕೊಂಡು ಹೋಗುವಂತೆ ಎಸ್‌ಬಿಐ ನ ಈ ಹೊಸ ಯೋಜನೆ ಸಹಕಾರಿಯಾಗಲಿದೆ.

Loading...

Leave a Reply

Your email address will not be published.