ವಾಟರ್ ಟ್ಯಾಂಕ್ ಉದ್ಘಾಟನೆಗೂ ಫುಲ್ ಪೇಜ್ ಜಾಹೀರಾತು, ಇದು ಕಾಂಗ್ರೆಸ್ ಅಭಿವೃದ್ಧಿಯ ಪರಿಕಲ್ಪನೆ – News Mirchi

ವಾಟರ್ ಟ್ಯಾಂಕ್ ಉದ್ಘಾಟನೆಗೂ ಫುಲ್ ಪೇಜ್ ಜಾಹೀರಾತು, ಇದು ಕಾಂಗ್ರೆಸ್ ಅಭಿವೃದ್ಧಿಯ ಪರಿಕಲ್ಪನೆ

ಕೆಲ ನಾಯಕರು ತಾವು ಮಾಡುವ ಸಣ್ಣ ಪುಟ್ಟ ಕೆಲಸಗಳಿಗೂ ಸಂಪೂರ್ಣ ಪುಟದ ಜಾಹೀರಾತುಗಳನ್ನು ಪ್ರಕಟಿಸುವುದು ಅವರ ಸಂಕುಚಿತ ಮನೋಭಾವಕ್ಕೆ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಎರಡು ದಿನಗಳ ಗುಜರಾತ್ ಪ್ರವಾಸದ ಭಾಗವಾಗಿ ದ್ವಾರಕಾ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಅವರು ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ನನಗೆ ತುಂಬಾ ಚೆನ್ನಾಗಿ ನೆನಪಿದೆ. ಗುಜರಾತ್ ನಲ್ಲಿ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಮಾಧವ್ ಸಿಂಗ್ ಸೋಲಂಕಿಯವರು ಜಾಮ್ ನಗರದಲ್ಲಿ ಒಂದು ವಾಟರ್ ಟ್ಯಾಂಕ್ ಉದ್ಘಾಟನೆಗೆ ಬಂದಿದ್ದಾಗ, ಪತ್ರಿಕೆಗಳಲ್ಲಿ ಫುಲ್ ಪೇಜ್ ಜಾಹೀರಾತುಗಳನ್ನು ನೀಡಿದ್ದರು. ಕಾಂಗ್ರೆಸ್ ದೃಷ್ಟಿಯಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಎಂದರೆ ಎಷ್ಟು ಸಂಕುಚಿತವಾಗಿರುತ್ತದೆ ನೋಡಿ ಎಂದು ಮೋದಿ ವ್ಯಂಗ್ಯವಾಡಿದರು.

ಬೇಗನೇ ಬಂದಂತಾಯಿತು ದೀಪಾವಳಿ

27 ರೀತಿಯ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ ದರವನ್ನು ಕಡಿತಗೊಳಿಸಿ, ಸಣ್ಣ, ಮಧ್ಯಮ ವರ್ಗದ ವರ್ತಕರಿಗೆ ಅನುಕೂಲವಾಗುವಂತೆ ಜಿ.ಎಸ್.ಟಿ ಕೌನ್ಸಿಲ್ ತೆಗೆದುಕೊಂಡ ತೀರ್ಮಾನದಿಂದ ದೇಶದಕ್ಕೆ ದೀಪಾವಳಿ ಹಬ್ಬ ಬೇಗನೇ ಬಂದಂತಾಗಿದೆ ಎಂದು ಮೋದಿ ಬಣ್ಣಿಸಿದರು. ತ್ರೈಮಾಸಿಕದಲ್ಲಿ ಎದುರಾಗುವ ಸವಾಲುಗಳನ್ನು ಪರಿಶೀಲಿಸಿ ತಿದ್ದುಪಡಿಗಳನ್ನು ಮಾಡುತ್ತೇವೆ ಎಂದು ಜಿ.ಎಸ್.ಟಿ ಜಾರಿಯಾದಾಗಲೇ ಹೇಳಿದ್ದೆವು ಎಂದು ನೆನಪಿಸಿದರು.

[ಇದನ್ನೂ ಓದಿ: ಭಾರತದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿರುವುದು ತುಂಬಾ ಕಷ್ಟ: ರಾಹುಲ್]

ಗುಜರಾತ್ ನ ಪ್ರಮುಖ ಭೂಭಾಗಕ್ಕೆ ದ್ವಾರಕಾ ದ್ವೀಪವನ್ನು ಸಂಪರ್ಕಿಸಲು ಕೈಗೊಂಡಿರುವ “ಓಖಾಬೆಟ್ ದ್ವಾರಕಾ” ಸೇತುವ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. 3.7 ಕಿ.ಮೀ. ಉದ್ದದ ಈ ಸೇತುವೆ ರೂ. 962 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಯೋಜಿಸಿದೆ.

Get Latest updates on WhatsApp. Send ‘Add Me’ to 8550851559

Loading...