ಜಮ್ಮೂ ಕಾಶ್ಮೀರ ಪೊಲೀಸರಿಗೂ ಗುಂಡು ನಿರೋಧಕ ವಾಹನ, ಜಾಕೆಟ್ |News Mirchi

ಜಮ್ಮೂ ಕಾಶ್ಮೀರ ಪೊಲೀಸರಿಗೂ ಗುಂಡು ನಿರೋಧಕ ವಾಹನ, ಜಾಕೆಟ್

ಜಮ್ಮೂ ಮತ್ತು ಕಾಶ್ಮೀರ ಪೊಲೀಸರಿಗೆ ಗುಂಡು ನಿರೋಧಕ ವಾಹನಗಳು ಮತ್ತು ಜಾಕೆಟ್ ಗಳನ್ನು ಒದಗಿಸಲು ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾನುವಾರ ಅನಂತನಾಗ್ ಪೊಲೀಸ್ ಮತ್ತು ಕೇಂದ್ರ ರಿಸರ್ವ್ ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು. ಇತ್ತೀಚೆಗೆ ಜಮ್ಮೂ ಕಾಶ್ಮೀರದಲ್ಲಿ ಪೊಲೀಸರ ಮೇಲೆ ಉಗ್ರಗಾಮಿಗಳ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. ಭಾನುವಾರವೂ ಅನಂತನಾಗ್ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ಉಗ್ರರ ದಾಳಿಗೆ ಬಲಿಯಾಗಿದ್ದರು.

ನಾಲ್ಕು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಶನಿವಾರ ಭೇಟಿ ಮಾಡಿದರು.

Loading...
loading...
error: Content is protected !!