ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದ ಗ್ಯಾಂಗ್ ಬಂಧನ – News Mirchi

ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದ ಗ್ಯಾಂಗ್ ಬಂಧನ

ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರಪ್ರದೇಶದ ವಿಶೇಷ ಟಾಸ್ಕ್ ಫೋರ್ಸ್ ಪೊಲೀಸರು ಬಂಧಿಸಿದ್ದಾರೆ. ನಕಲಿ ಆಧಾರ್ ಕಾರ್ಡ್ ತಯಾರಿಕಾ ಗ್ಯಾಂಗ್ ನ ಸೂತ್ರಧಾರ ಸೌರಭ್ ಸಿಂಗ್ ಸೇರಿದಂತೆ ಗ್ಯಾಂಗ್ ನ 10 ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಗ್ಯಾಂಗ್ ನ ಸದಸ್ಯರು ತಮ್ಮದೇ ಬೆರಳಚ್ಚು ಮತ್ತು ರೆಟಿನಾ ಸ್ಕ್ಯಾನ್ ಮಾಡಿ ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಕಲಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ವೇಳೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತದ್ರೂಪು ಬೆರಳಚ್ಚು ಮತ್ತು ಟ್ಯಾಂಪರ್ ಮಾಡಲಾದ ಸಾಫ್ಟ್ ವೇರ್ ಮೂಲಕ ಬಯೋಮೆಟ್ರಿಕ್ ಭದ್ರತಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದರು ಎನ್ನಲಾಗಿದೆ.

ಬಂಧಿತರಿಂದ ಬೆರಳಚ್ಚು ಸ್ಕ್ಯಾನರ್ ಮತ್ತು ರೆಟಿನಾ ಸ್ಕ್ಯಾನರ್ ಮತ್ತು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ್ದರು.

English Summary:

The Uttar Pradesh Special Task Force has claimed that it has arrested a gang of ten people including its kingpin Saurabh Singh for allegedly preparing fake aadhaar cards.

Loading...