ಮಹಾರಾಷ್ಟ್ರದಲ್ಲಿ ಗೋರಕ್ಷಕರಿಗೆ ಗುರುತಿನ ಚೀಟಿ – News Mirchi

ಮಹಾರಾಷ್ಟ್ರದಲ್ಲಿ ಗೋರಕ್ಷಕರಿಗೆ ಗುರುತಿನ ಚೀಟಿ

ನಾಗಪುರ: ಹಿಂಸಾಚಾರಕ್ಕೆ ಕಡಿವಾಣ ಹಾಕಲು ಮಹಾರಾಷ್ಟ್ರದಲ್ಲಿನ ಗೋ ರಕ್ಷಕರಿಗೆ ಗುರುತಿನ ಚೀಟಿಗಳನ್ನು ನೀಡುವುದಾಗಿ ವಿಶ್ವ ಹಿಂದೂ ಪರಿಷತ್ ಹೇಳಿದೆ. ಗೋರಕ್ಷಣೆಯಲ್ಲಿ ತೊಡಗಿಕೊಳ್ಳುವ ಸ್ವಯಂ ಸೇವಕರ ಹೆಸರುಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೂ ಸಲ್ಲಿಸುವುದಾಗಿ ವಿಹೆಚ್ಪಿ ಮುಖಂಡ ಅಜಯ್ ನಿಲ್ದಾವರ್ ಅವರು ಹೇಳಿದ್ದಾರೆ.

ಈ ಗುರುತಿನ ಚೀಟಿಗಳು ಅಸಲಿ ಗೋರಕ್ಷಕರು ಯಾರು ಎಂಬುದನ್ನು ತಿಳಿಸುವ ಮೂಲಕ, ಸಮಾಜ ಘಾತುಕ ಶಕ್ತಿಗಳನ್ನು ಪ್ರತ್ಯೇಕಿಸಿದಂತಾಗುತ್ತದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರೆ ಸಂಘಟನೆಗಳ ಜೊತೆ ಹಲವು ಸುತ್ತಿನ ಮಾತುಕತೆಗಳು ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿರುವುದಾಗಿ ನಿಲ್ದಾವರ್ ಹೇಳಿದ್ದಾರೆ.

Loading...