ಹುತಾತ್ಮ ಅಧಿಕಾರಿ ಪುತ್ರಿಯ ಶಿಕ್ಷಣದ ಜವಾಬ್ದಾರಿ ಹೊತ್ತ ಹೃದಯವಂತ ಕ್ರಿಕೆಟಿಗ ಗಂಭೀರ್ – News Mirchi

ಹುತಾತ್ಮ ಅಧಿಕಾರಿ ಪುತ್ರಿಯ ಶಿಕ್ಷಣದ ಜವಾಬ್ದಾರಿ ಹೊತ್ತ ಹೃದಯವಂತ ಕ್ರಿಕೆಟಿಗ ಗಂಭೀರ್

ಆಗಸ್ಟ್ 28 ರಂದು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಕಾಶ್ಮೀರದ ಅಬ್ದುಲ್ ಅಸಿಸ್ಟೆಂಟ್ ಸಬ್ ಇನ್ಸ್’ಪೆಕ್ಟರ್ ಅಬ್ದುಲ್ ರಷೀದ್ ಪುತ್ರಿ ಝೋರಾಳ ಫೋಟೋ ಇಂಟರ್ನೆಟ್ ನಲ್ಲಿ ಹರಿದಾಡಿ ಎಲ್ಲರ ಹೃದಯ ಛಿದ್ರ ಮಾಡಿತ್ತು. ಉಗ್ರರ ದಾಳಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಬ್ದುಲ್ ರಷೀದ್ ನಂತರ ಸಾವನ್ನಪ್ಪಿದ್ದರು.

ಇದೀಗ ಭಾರತದ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅಬ್ದುಲ್ ರಷೀದ್ ಪುತ್ರಿಗೆ ಸಹಾಯ ಹಸ್ತ ಚಾಚಿದ್ದಾರೆ. ಆಕೆಯ ತಂದೆಯನ್ನು ಪುನಃ ಆಕೆಗೆ ಕೊಡಲು ಸಾಧ್ಯವಾಗದಿರುಬಹುದು, ಆದರೆ ಆಕೆಯ ಕನಸನ್ನು ಸಾಕಾರಗೊಳಿಸಲು ಝೋರಾಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತೇನೆ ಎಂದು ಘೋಷಿಸಿದ್ದಾರೆ.

“ಝೋರಾ ನಿನಗೆ ಲಾಲಿ ಹಾಡಿ ಮಲಗಿಸಲು ನನಗೆ ಸಾಧ್ಯವಿಲ್ಲ. ಆದರೆ ನಿನ್ನ ಕನಸುಗಳೊಂದಿಗೆ ಜೀವಿಸಲು ನಾನು ಸಹಾಯ ಮಾಡುತ್ತೇನೆ. ನಿನ್ನ ಸಂಪೂರ್ಣ ಶಿಕ್ಷಣಕ್ಕೆ ನಾನು ಸಹಾಯ ಮಾಡುತ್ತೇನೆ” ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದರು. ಇದಕ್ಕೆ ಗೌತಂ ಗಂಭೀರ್ ಗೆ ಧನ್ಯವಾದಗಳನ್ನು ತಿಳಿಸಿದ ಝೋರಾ, ತಾನು ಮತ್ತು ತನ್ನ ಕುಟುಂಬ ನಿಮ್ಮ ಉದಾರತೆಗೆ ಸಂತೋಷಗೊಂಡಿದ್ದೇವೆ ಎಂದು ಹೇಳಿದ್ದಾಳೆ. ಭವಿಷ್ಯತ್ತಿನಲ್ಲಿ ವೈದ್ಯೆಯಾಗುವ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ.

ಝೋರಾ ಮಾತಿಗೆ ಪುನಃ ಪ್ರತಿಕ್ರಿಯಿಸಿರುವ ಗಂಭೀರ್, ಝೋರಾ ನನಗೆ ಧನ್ಯವಾದ ಹೇಳಬೇಡ, ನೀನು ನನ್ನ ಮಕ್ಕಳು ಆಜೀನ್ ಮತ್ತು ಅನೈಜಾ ರವರಿದ್ದಂತೆ. ನೀನು ವೈದ್ಯಳಾಗಬೇಕೆಂದು ಬಯಸಿರುವುದಾಗಿ ತಿಳಿಯಿತು. ರೆಕ್ಕೆ ಬಿಚ್ಚಿ ನಿನ್ನ ಕನಸನ್ನು ನನಸು ಮಾಡಿಕೋ. ನಾವು ನಿನ್ನೊಂದಿಗಿದ್ದೇವೆ ಎಂದು ಹೇಳಿದ್ದಾರೆ.

ಗೌತಮ್ ಗಂಭೀರ ಹೀಗೆ ಸಹಾಯ ಹಸ್ತ ಚಾಚುವುದು ಇದೇ ಮೊದಲಲ್ಲ. ಇದೇ ವರ್ಷಾರಂಭದಲ್ಲಿ 25 ಹುತಾತ್ಮ ಸಿ.ಆರ್.ಪಿ.ಎಫ್ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊರುವುದಾಗಿ ಹೇಳಿದ್ದರು. ಗೌತಮ್ ಗಂಭೀರ್ ಫೌಂಡೇಷನ್ ಅಡಿಯಲ್ಲಿ ಬಡವರ ಹಸಿವನ್ನು ನೀಗಿಸಲು ಜುಲೈ 31 ರಂದು ಉಚಿತ ಸಮುದಾಯ ಅಡುಗೆ ಮನೆಯನ್ನು ಆರಂಭಸಿದ್ದರು. ಅಷ್ಟೇ ಅಲ್ಲದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಥ್ಲೀಟ್ ಒಬ್ಬರ ನೆರವಿಗೂ ಅವರು ಬಂದಿದ್ದಾರೆ.

Loading...