ಜಿಯೋನಿ ಎ-1 ಅತಿ ಹೆಚ್ಚು ಮುಂಗಡ ಬುಕಿಂಗ್ ಆದ ಸ್ಮಾರ್ಟ್ ಫೋನ್

ಚೀನೀ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಜಿಯೋನಿ ಕೇವಲ 10 ದಿನಗಳಲ್ಲಿ ತನ್ನ ಪ್ರಮುಖ ಜಿಯೋನಿ ಎ-1 ಸ್ಮಾರ್ಟ್ ಫೋನ್ ಗೆ 74,682 ಮುಂಗಡ ಆರ್ಡರ್ ಗಳು ಬಂದಿವೆ ಎಂದು ಹೇಳಿದೆ. ಇದುವರೆಗೂ ಕಂಪನಿ ಸ್ವೀಕರಿಸಿದ ಮುಂಗಡ ಬುಕಿಂಗ್ ಗಳ ಮೌಲ್ಯ ರೂ.150 ಕೋಟಿ ಎಂದು ಪ್ರಕಟಿಸಿದೆ.

ಜಿಯೋನಿ ಎ-1 ಸ್ಮಾರ್ಟ್ ಫೋನ್ ಗೆ ಮಾರ್ಚ್ 31 ರಿಂದ ಏಪ್ರಿಲ್ 9 ರವರೆಗೂ ಬುಕಿಂಗ್ ಗೆ ಅವಕಾಶವಿತ್ತು.

ಎ-1 ಮಾದರಿ ಸ್ಮಾರ್ಟ್ ಫೋನ್ ಗೆ 2 ವರ್ಷಗಳ ವಾರೆಂಟಿಯನ್ನು ನೀಡಿರುವ ಜಿಯೋನಿ, ಇದರ ಜೊತೆಗೆ ಜೆಬಿಎಲ್ ವಾಚ್ ಅಥವಾ ಸ್ವಿಸ್ ಮಿಲಿಟರಿ ಬ್ಲೂ ಟೂತ್ ಸ್ಪೀಕರ್ ಕೊಡುಗೆಯಾಗಿ ನೀಡುತ್ತಿದೆ.

ರೂ. 8,000 ದಿಂದ ರೂ. 25,000 ದವರೆಗಿನ ಮೌಲ್ಯದ ಸ್ಮಾರ್ಟ್ ಫೋನ್ ಮುಂಗಡ ಬುಕಿಂಗ್ ನಲ್ಲಿಯೇ ಅತಿ ಹೆಚ್ಚು ಬುಕಿಂಗ್ ಆದ ಸ್ಮಾರ್ಟ್ ಫೋನ್ ಇದಾಗಿದೆ.

ರೂ. 19,999 ಮೌಲ್ಯದ ಈ ಜಿಯೋನಿ ಎ1 ಸ್ಮಾರ್ಟ್ ಫೋನ್, 16 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಹೊಂದಿದ್ದರೆ, 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹೊಂದಿದೆ.

ಡಿಸ್‌ಪ್ಲೇ ವಿಷಯಕ್ಕೆ ಬಂದರೆ ಇದು 5.5 ಇಂಚಿನ ದುಂಡಗಿನ ಅಂಚುಗಳ ಹೆಚ್.ಡಿ ಡಿಸ್‌ಪ್ಲೇ ಹೊಂದಿದೆ. 2 GHz ಆಕ್ಟಾ ಕೋರ್ ಪಿ10 ಹೀಲಿಯೋಸ್ ಪ್ರೊಸೆಸರ್ ಮತ್ತು 4 ಜಿಬಿ ರ‌್ಯಾಮ್ ಸಾಮರ್ಥ್ಯ ಹೊಂದಿದೆ.

Loading...
error: Content is protected !!