ಕಳ್ಳ ಇರಲಿ, ಡಾನ್ ಇರಲಿ ಎಲ್ಲಾ ಖೈದಿಗಳಿಗೂ ಒಂದೇ ಆಹಾರ ಇರಲಿ |News Mirchi

ಕಳ್ಳ ಇರಲಿ, ಡಾನ್ ಇರಲಿ ಎಲ್ಲಾ ಖೈದಿಗಳಿಗೂ ಒಂದೇ ಆಹಾರ ಇರಲಿ

ಸಣ್ಣ ಅಪರಾಧ ಮಾಡಿದ ಖೈದಿಗಳೇ ಇರಲಿ, ದೊಡ್ಡ ಮಾಫಿಯಾ ಡಾನ್ ಗಳೇ ಇರಲಿ, ಎಲ್ಲರಿಗೂ ಒಂದೇ ರೀತಿಯ ಆಹಾರ ನೀಡಬೇಕು, ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜೈಲುಗಳಲ್ಲಿ ಕೆಲವು ಖೈದಿಗಳು ಜೈಲುಗಳಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿರುವುದಾಗಿ ವರದಿಗಳು ಮತ್ತು ಆರೋಪಗಳು ಬಂದ ಹಿನ್ನೆಲೆಯಲ್ಲಿ ಯೋಗಿ ಅಧಿಕಾರಿಗಳಿಗೆ ಅದಕ್ಕೆಲ್ಲಾ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ.

ಎಲ್ಲಾ ಜೈಲುಗಳಲ್ಲಿ ಖೈದಿಗಳು ಮೊಬೈಲ್ ಬಳಸದಂತೆ ಮೊಬೈಲ್ ಜಾಮರ್ ಅಳವಡಿಸಿ, ಸಿಸಿಟಿವಿ ಅಳವಡಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಜೈಲು ಅಧಿಕಾರಿಗಳು ಯಾವುದೇ ಕುಖ್ಯಾತ ಕ್ರಿಮಿನಲ್ ಗಳಿಗೆ ಸಹಕರಿಸುವುದಾಗಲೀ, ವಿನಾಕಾರಣ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸುವುದಾಗಲೀ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

Loading...
loading...
error: Content is protected !!