ಅಮೆರಿಕದಿಂದ 271 ಭಾರತೀಯರಿಗೆ ಬಹಿಷ್ಕಾರ, ವಿವರ ಕೇಳಿದ ಸುಷ್ಮಾ ಸ್ವರಾಜ್

ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ತಮ್ಮ ದೇಶದಿಂದ ಬಹಿಷ್ಕರಿಸುತ್ತಿರುವುದಾಗಿ ಟ್ರಂಪ್ ಸರ್ಕಾರ ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದೆ. ಅಮೆರಿಕಾ 270 ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕಳಿಸಲಿರುವುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸಂಸತ್ತಿನಲ್ಲಿ ಹೇಳಿದರು. ಆದರೆ ಅವರನ್ನು ಭಾರತಕ್ಕೆ ಕಳಿಸುವ ಮುನ್ನ ಆ 271 ಜನರ ಹೆಸರುಗಳು, ವಿವರಗಳು ತಿಳಿಸಬೇಕು ಎಂದು ಅಮೆರಿಕಕ್ಕೆ ಮನವಿ ಮಾಡಿರುವುದಾಗಿ ಸುಷ್ಮಾ ಹೇಳಿದರು.

“ರಾಷ್ಟ್ರೀಯತೆಯನ್ನು ಪರಿಶೀಲಿಸದೆಯೇ ಆ ಪಟ್ಟಿಯಲ್ಲಿರುವವರೆಲ್ಲಾ ಭಾರತೀಯರೆಂದು ನಂಬುವುದು ಹೇಗೆ? ಭಾರತೀಯರೆಂದು ಖಚಿತವಾದ ನಂತರವೇ ಅವರಿಗೆ ಭಾರತಕ್ಕೆ ಬರಲು ಅನುಮತಿ ನೀಡಲು ತುರ್ತು ಪ್ರಮಾಣಪತ್ರ ಜಾರಿ ಮಾಡುತ್ತೇವೆ” ಎಂದು ಸುಷ್ಮಾ ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!