ಚೀನಾ ಮೀಡಿಯಾದಿಂದ ಮೋದಿಗೆ ಪ್ರಶಂಸೆ, ಸಲಹೆ – News Mirchi
We are updating the website...

ಚೀನಾ ಮೀಡಿಯಾದಿಂದ ಮೋದಿಗೆ ಪ್ರಶಂಸೆ, ಸಲಹೆ

ಚೀನಾ ಭಾರತದ ಪ್ರತಿ ಹೆಜ್ಜೆಯನ್ನು ಗಮನಿಸುತ್ತಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಭಾರತದಲ್ಲಿನ ಏನೇ ನಡೆದರೂ ಪ್ರತಿ ಅದರ ಪ್ರಭಾವವನ್ನು ತನ್ನ ಡ್ರ್ಯಾಗನ್ ಕಣ್ಣುಗಳಿಂದ ಗಮನಿಸುತ್ತಿರುತ್ತದೆ. ಕೆಲ ದಿನಗಳ ಹಿಂದೆ ನೋಟು ರದ್ದು ಗೊಳಿಸಿದ ಮೋದಿಯವರ ಕುರಿತು ಲೇಖನ ಪ್ರಕಟಿಸಿದೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್‌. ಮೋದಿಯವರು ನೋಟು ರದ್ದುಗೊಳಿಸಿ ಸಾಹಸದ ತೀರ್ಮಾನ ಕೈಗೊಂಡಿದ್ದಾರೆ. ಇದು ಭಾರತ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗಲು ಸಹಕಾರವಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

ಮೋದಿ ಕುರಿತು ಮತ್ತೊಂದು ಲೇಖನ ಪ್ರಕಟಿಸಿದ ಗ್ಲೋಬಲ್ ಟೈಮ್ಸ್, ಮೋದಿಯವರು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು, ಇಲ್ಲವಾದರೆ ದೊಡ್ಡ ನೋಟು ರದ್ದು ನಿರ್ಧಾರ ದೊಡ್ಡ ಪೊಲಿಟಿಕಲ್ ಜೋಕ್ ಆಗಿ ಉಳಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಇಂತಹ ನಿರ್ಧಾರ ತೆಗೆದುಕೊಳ್ಳುವುದು ರಾಜಕೀಯವಾಗಿ ಸಾಹಸದ ಕೆಲಸ. ಇದರಲ್ಲಿ ಮೋದಿ ಯಶಸ್ವಿಯಾಗಬೇಕಿದ್ದರೆ ಬುದ್ದಿವಂತಿಕೆಯಿಂದ ಮುನ್ನಡೆಯಬೇಕು ಎಂದು ಎಚ್ಚರಿಸಿದೆ. ಚುನಾವಣೆ ಸಮಯದಲ್ಲಿ ಕಪ್ಪು ಹಣವನ್ನು ಹೊರತರುವುದಾಗಿ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು, ಇಲ್ಲದಿದ್ದರೆ ಮೋದಿ ರಾಜಕೀಯ ಜೀವನ ನಗೆಪಾಟಲು ಆಗುತ್ತದೆ ಎಂದು ಹೇಳಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!