15 ವರ್ಷಗಳಿಂದ ಕುಟುಂಬದವರಿಂದಲೇ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆ – News Mirchi

15 ವರ್ಷಗಳಿಂದ ಕುಟುಂಬದವರಿಂದಲೇ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆ

ಪಣಜಿ: ಕಳೆದ 15 ವರ್ಷಗಳಿಂದ 45 ವರ್ಷದ ಮಹಿಳೆಯನ್ನು ಕತ್ತಲೆ ಕೋಣೆಯಲ್ಲಿ ಪೋಷಕರೇ ಕೂಡಿಹಾಕಿದ್ದ ಘಟನೆ ಪಣಜಿ ಬಳಿಯ ಕಾಂಡೋಲಿಮ್ ಗ್ರಾಮದಲ್ಲಿ ನಡೆದಿದ್ದು, ಮಂಗಳವಾರ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

ಆಕೆಯ ಕುಟುಂಬದವರೇ ಸುನಿತಾ ವರ್ಲೇಕರ್ ಎಂಬ ಮಹಿಳೆಯನ್ನು ಕೂಡಿಹಾಕಿ ಕಿಟಕಿ ಮೂಲಕ ಊಟ ನೀರು ಕೊಡುತ್ತಿದ್ದರು ಎನ್ನಲಾಗಿದೆ. ಎನ್.ಜಿ.ಒ ಒಂದು ನೀಡಿದ ಮಾಹಿತಿ ಪಡೆದ ಪೊಲೀಸರು ಆಕೆಯ ರಕ್ಷಣೆಗೆ ಧಾವಿಸಿದ್ದು ಕತ್ತಲಕೂಪದಿಂದ ರಕ್ಷಿಸಿದ್ದಾರೆ.

ಆಕೆಯನ್ನು ರಕ್ಷಿಸುವ ಪೊಲೀಸರು ರಕ್ಷಿಸುವ ಸಂದರ್ಭದಲ್ಲಿ ವಿದ್ಯುತ್ ಸೌಲಭ್ಯವಿಲ್ಲದ ಕೊಠಡಿಯಲ್ಲಿ ಮಹಿಳೆ ನಗ್ನವಾಗಿ ಮೂತ್ರದ ದುರ್ನಾತ ಬೀರುತ್ತಿದ್ದ ವಾತಾವರಣದಲ್ಲಿ ಕಂಡು ಬಂದಿದ್ದಳು. ಮುಂಬಯಿಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ ಮಹಿಳೆ, ಆತನಿಗೆ ಮತ್ತೊಂದು ಮದುವೆಯಾಗಿದೆ ಎಂದು ತಿಳಿದು ತವರಿಗೆ ವಾಪಸಾಗಿದ್ದಳು ಕುಟುಂಬದವರು ಹೇಳಿದ್ದಾರೆ. ಮುಂಬಯಿಯಿಂದ ವಾಪಸಾದ ನಂತರ ಅಸಹಜವಾಗಿ ವರ್ತಿಸುತ್ತಿದ್ದರಿಂದ ಆಕೆಯನ್ನು ಕುಟುಂಬದವರು ಕೋಣೆಯಲ್ಲಿ ಕೂಡಿಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜಿಯೋ ಗ್ರಾಹಕರ ಮಾಹಿತಿ ಸೋರಿಕೆ, ಶಂಕಿತನ ಬಂಧನ

“ಬೈಲಾಂಚೊ ಸಾದ್” ಎಂಬ ಎನ್.ಜಿ.ಒ ಗೆ ವ್ಯಕ್ತಿಯೊಬ್ಬರು ಮಹಿಳೆಯನ್ನು ಕೂಡಿ ಹಾಕಿದ್ದರ ಕುರಿತು ಇಮೇಲ್ ಮುಖಾಂತರ ಮಾಹಿತಿ ನೀಡಿದ್ದು, ನಂತರ ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದ್ದು, ಮಹಿಳೆಯ ಸಹೋದರ ಮೋಹನ್ ದಾಸ್ ವರ್ಲೇಕರ್ ವಿರುದ್ಧ ಸೆಕ್ಷನ್ 342 ರ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ

Loading...