ಚಿನ್ನ ಖರೀದಿ ಕುರಿತ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಜೇಟ್ಲಿ – News Mirchi
We are updating the website...

ಚಿನ್ನ ಖರೀದಿ ಕುರಿತ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಜೇಟ್ಲಿ

ನೋಟು ರದ್ದು ನಂತರ ಕೇಂದ್ರದ ಕಣ್ಣು ಚಿನ್ನದ ಮೇಲೆ ಬಿದ್ದಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಚಿನ್ನದ ಖರೀದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಘೋಷಿಸಿದ ಹಣದಿಂದ ಚಿನ್ನ ಖರೀದಿಸಿದರೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ತೆರಿಗೆ ವಿನಾಯಿತಿ ಇರುವ ಹಣದಿಂದ, ಮನೆಯಲ್ಲಿ ಕೂಡಿಟ್ಟ ಹಣದಿಂದ ಚಿನ್ನ ಖರೀದಿಸಿದರೂ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. ಹೀಗೆ ಖರೀದಿಸಿದ ಚಿನ್ನದ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಮತ್ತು ವಶಪಡಿಸಿಕೊಳ್ಳುವುದೂ ಇಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಚಿನ್ನದ ಕುರಿತು ಹರಿದಾಡುತ್ತಿರುವ ಸುದ್ದಿಗಳಲ್ಲಿ ಸತ್ಯವಿಲ್ಲ. ಹಿರಿಯರಿಂದ ಬಂದ ಚಿನ್ನದ ಮೇಲೆಯೂ ತೆರಿಗೆ ಇರುವುದಿಲ್ಲ ಎಂದರು.

ವಿವಾಹಿತ ಮಹಿಳೆ ಬಳಿ 500 ಗ್ರಾಂ ಚಿನ್ನವಿದ್ದರೆ ಸರ್ಕಾರ ವಶಪಡಿಸಿಕೊಳ್ಳುವುದಿಲ್ಲ, ಅದೇ ರೀತಿ ಮದುವೆಯಾಗದ ಮಹಿಳೆಯ ಬಳಿ 250 ಗ್ರಾಂ ಚಿನ್ನವಿದ್ದರೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ವಿವರಿಸಿದರು. ಹಾಗೆಯೇ ಪುರುಷರ ಬಳಿ, 100 ಗ್ರಾಂ. ವರೆಗೂ ಚಿನ್ನವಿರಬಹುದು ಎಂದು ಜೇಟ್ಲಿ ಹೇಳಿದ್ದಾರೆ.

ದೊಡ್ಡ ನೋಟು ರದ್ದು ನಂತರ ಕಪ್ಪು ಹಣ ಹೊಂದಿರುವವರು ಮನಬಂದಂತೆ ಚಿನ್ನ ಖರೀದಿಗೆ ಇಳಿದಿದ್ದರು. ಕಾಳ ಧನಿಕರು ತಮ್ಮಲ್ಲಿರುವ ಕಪ್ಪು ಹಣದಿಂದ ಹೆಚ್ಚಾಗಿ ಚಿನ್ನ ಖರೀದಿಗೆ ಮುಗಿ ಬಿದ್ದಿದ್ದು, ಅಂತಹವರಿಗೆ ಚಿನ್ನದ ವ್ಯಾಪಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿದ ಕೇಂದ್ರ ಸರ್ಕಾರ ಗಂಭೀರವಾಗಿ ಎಚ್ಚರಿಕೆಯೂ ನೀಡಿದೆ. ಖರೀದಿದಾರರಿಂದ ಪಾನ್ ಕಾರ್ಡ್ ವಿವರ ಪಡೆಯದೇ ಯಾವುದೇ ವ್ಯವಹಾರ ಮಾಡಬಾರದು ಎಂದು ಸೂಚಿಸಿದೆ.

ಅಷ್ಟೇ ಅಲ್ಲದೆ ಹಲವು ಪ್ರದೇಶಗಳಲ್ಲಿ ಚಿನ್ನದ ಮಳಿಗೆಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿಗಳನ್ನೂ ನಡೆಸಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!