ಟೀಮ್ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿ – News Mirchi
We are updating the website...

ಟೀಮ್ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿ

ಟೀಮ್ ಇಂಡಿಯಾಗೆ ಬಿಸಿಸಿಐ ಸಹಿ ಸುದ್ದಿ ಘೋಷಿಸಿದೆ. ತಂಡದ ಸದಸ್ಯರ ವೇತನಗಳನ್ನು ದ್ವಿಗುಣಗೊಳಿಸಿ ತೀರ್ಮಾನ ಕೈಗೊಂಡ ಬಿಸಿಸಿಐ, ಹೊಸ ಕಾಂಟ್ರಾಕ್ಟ್ ಗಳನ್ನು ಪ್ರಕಟಿಸಿದೆ. ಮೂರು ವರ್ಗಗಳಾಗಿ ಆಟಗಾರರನ್ನು ವಿಭಜಿಸಿ ರವೀಂದ್ರ ಜಡೇಜಾ ರನ್ನು ಎ ಗ್ರೇಡ್ ಗೆ ಬಡ್ತಿ ನೀಡಿ ಕಾಂಟ್ರಾಕ್ಟ್ ನಿಂದ ಹರ್ಭಜನ್ ಸಿಂಗ್ ರವರನ್ನು ಕೈಬಿಟ್ಟಿದೆ.

ಬಿಸಿಸಿಐ ಪ್ರಕಟಿಸಿದ ಎ ಗ್ರೇಡ್ ನಲ್ಲಿ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಪೂಜಾರಾ, ರೆಹಾನೆ, ಮುರಳಿ ವಿಜಯ್ ಸ್ಥಾನ ಗಳಿಸದರೆ, ಬಿ ಗ್ರೇಡ್ ನಲ್ಲಿ ಯುವರಾಜ್ ಸಿಂಗ್, ಮಹ್ಮದ್ ಶಮಿ, ರೋಹಿತ್ ಶರ್ಮ ಇದ್ದಾರೆ. ಶಿಕರ್ ಧವನ್ ಸಿ ಗ್ರೇಡ್ ಗೆ ತಳ್ಳಲ್ಪಟ್ಟಿದ್ದು, ಬಿಸಿಸಿಐ ಕಾಂಟ್ರಾಕ್ಟ್ ನಿಂದ ಹರ್ಭಜನ್ ಔಟ್ ಆಗಿದ್ದಾರೆ.

ಎ ಗ್ರೇಡ್ ಆಟಗಾರರ ವೇತನವನ್ನು ರೂ.2 ಕೋಟಿಗೆ ಹೆಚ್ಚಳ ಮಾಡಿರುವ ಬಿಸಿಸಿಐ, ಬಿ ಗ್ರೇಡ್ ಆಟಗಾರರ ವೇತನ ರೂ. 1 ಕೋಟಿಗೆ ಹೆಚ್ಚಳ ಮಾಡಿದೆ. ಇನ್ನು ಸಿ ಗ್ರೇಡ್ ಆಟಗಾರರಿಗೆ ರೂ.50 ಲಕ್ಷ ನೀಡಲಿದೆ. ಹೊಸ ವೇತನಗಳು 2016 ಅಕ್ಟೋಬರ್ ನಿಂದ ಅನ್ವಯವಾಗಲಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!