ನನ್ನ ಮಗ ತಪ್ಪು ಮಾಡಿದ್ದಾನೆ, ಗೂಗಲ್ ನಲ್ಲಿ ಉದ್ಯೋಗ ಸುಳ್ಳು |News Mirchi

ನನ್ನ ಮಗ ತಪ್ಪು ಮಾಡಿದ್ದಾನೆ, ಗೂಗಲ್ ನಲ್ಲಿ ಉದ್ಯೋಗ ಸುಳ್ಳು

ಚಂಡೀಗಢದ ಪಿಯುಸಿ ವಿದ್ಯಾರ್ಥಿ ಹರ್ಷಿತ್ ಶರ್ಮ ಎಂಬಾತನಿಗೆ ಟೆಕ್ ದಿಗ್ಗಜ ಗೂಗಲ್ ನಿಂದ ಮಾಸಿಕ 12 ಲಕ್ಷ ವೇತನದ ಆಫರ್ ಬಂದಿದೆ ಎಂಬ ಸುದ್ದಿ ಸುಳ್ಳಾಗಿದ್ದು, ಅದು ತಮ್ಮ ಮಗನ ತಪ್ಪಿನಿಂದ ಹಾಗೆ ಪ್ರಚಾರವಾಗಿದೆ ಎಂದು ಆತನ ಪೋಷಕರು ಸ್ಪಷ್ಟಪಡಿಸಿದ್ದಾರೆ. ಆದರೆ ಮಗ ಏನು ತಪ್ಪು ಮಾಡಿದ್ದಾನೆ, ಈಗ ಆತ ಎಲ್ಲಿದ್ದಾನೆ ಎಂಬುದರ ಕುರಿತು ಅವರು ಮಾಹಿತಿ ನೀಡಲು ಅವರು ಹಿಂದೇಟು ಹಾಕಿದ್ದಾರೆ.

  • No items.

ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲರು, ಹರ್ಷಿತ್ ಶರ್ಮನ ತಾಯಿ ಕರೆ ಮಾಡಿ ತಮ್ಮ ಮಗ ತಪ್ಪು ಮಾಡಿದ್ದಾನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಆತ ಆಹಾರವನ್ನು ತಿರಸ್ಕರಿಸುತ್ತಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆತನ ತಾಯಿ ಹೇಳಿದ್ದಾಗಿ ಪ್ರಾಂಶುಪಾಲರು ಹೇಳಿದ್ದಾರೆ. ಹರ್ಷಿತ್ ಶರ್ಮನಿಂದ ಏನು ತಪ್ಪಾಗಿದೆ, ಆತ ಈಗ ಎಲ್ಲಿದ್ದಾನೆ ಎಂಬುದರ ಕುರಿತು ಆಕೆಯ ತಾಯಿ ಯಾವುದೇ ಮಾಹಿತಿ ನೀಡಿಲ್ಲವೆಂದು ಪ್ರಾಂಶುಪಾಲರು ಹೇಳಿದ್ದಾರೆ.

ಪಿಯುಸಿ ಓದಿದವನಿಗೆ ಗೂಗಲ್ ನಿಂದ ಬಂಪರ್ ಆಫರ್, ತಿಂಗಳಿಗೆ 12 ಲಕ್ಷ ವೇತನ!

ಹರ್ಷಿತ್ ಶರ್ಮನಿಗೆ ಯಾವುದೇ ಆಫರ್ ನೀಡಿಲ್ಲವೆಂದು ಗೂಗಲ್ ಮಂಗಳವಾರ ಸ್ಪಷ್ಟಪಡಿಸಿತ್ತು. ಇದಕ್ಕೂ ಮುನ್ನ ಹರ್ಷಿತ್ ಶರ್ಮನಿಗೆ ಗೂಗಲ್ ನಿಂದ ಉದ್ಯೋಗದ ಆಫರ್ ಬಂದಿದ್ದು, ತರಬೇತಿ ಅವಧಿಯಲ್ಲಿ ಮಾಸಿಕ 4 ಲಕ್ಷ ವಿದ್ಯಾರ್ಥಿ ವೇತನ ಮತ್ತು ತರಬೇತಿ ಮುಗಿದ ನಂತರ ಮಾಸಿಕ 12 ಲಕ್ಷ ವೇತನ ಸಿಗುತ್ತದೆ ಎಂದು ಪ್ರಚಾರವಾಗಿತ್ತು.

ಹರ್ಷಿತ್ ಶರ್ಮನ ಸಾಧನೆ ಕುರಿತಂತೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದ ಕುರಿತು ಶಾಲೆಯಿಂದ ಸ್ಥಳೀಯ ಅಧಿಕಾರಿಗಳು ವರದಿ ಕೆಳಿದ್ದರು. ಮಾಧ್ಯಮಗಳಿಗೆ ನೀಡಿದ್ದ ಪ್ರಕಟಣೆಯಲ್ಲಿ ಹರ್ಷಿತ್ ಶರ್ಮನಿಗೆ ಗೂಗಲ್ ನಲ್ಲಿ ಮಾಸಿಕ 12 ಲಕ್ಷ ವೇತನದ ಆಫರ್ ಸಿಕ್ಕಿದೆ ಎಂದು ಹೇಳಲಾಗಿತ್ತು.

ಡಿ.ಕೆ. ಸಹೋದರರು ಮತ್ತು ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ದಾಳಿ

ಸದ್ಯ ಹರ್ಷಿತ್ ಶರ್ಮ ಎಲ್ಲಿದ್ದಾನೆಂಬುದು ತಿಳಿದಿಲ್ಲ. ಆತನ ಎರಡೂ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ. ಆತನ ಫೇಸ್ ಬುಕ್ ಅಕೌಂಟ್ ಮಾತ್ರ ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದು, ಕ್ಯಾಲಿಫೋರ್ನಿಯಾದಲ್ಲಿರುವುದಾಗಿ ಹೇಳುತ್ತಿದೆ. ಸಂಭ್ರಮಾಚರಣೆಯ ವೀಡಿಯೋ ಕೂಡಾ ಈ ಹಿಂದೆ ಪೋಸ್ಟ್ ಮಾಡಲಾಗಿದ್ದು, ಇದೀಗ ತೆಗೆಯಲಾಗಿದೆ.

Loading...
loading...
error: Content is protected !!