ಗೂಗಲ್ ಮ್ಯಾಪ್ ನಲ್ಲಿ ಬಂತು ‘ಟೂ ವೀಲರ್ ಮೋಡ್’

ಗೂಗಲ್ ಸಂಸ್ಥೆಯು ಭಾರತದಲ್ಲಿನ ತನ್ನ ಗೂಗಲ್ ಮ್ಯಾಪ್ ನಲ್ಲಿ ಹೊಸದಾಗಿ ‘ಟೂ ವೀಲರ್’ ಮೋಡ್ ಪರಿಚಹಿಸಿದೆ. ಮ್ಯಾಪ್ ನಲ್ಲಿ ಕಾರು, ರೈಲು, ಮತ್ತು ಕಾಲ್ನಡಿಗೆ ಚಿಹ್ನೆಗಳ ಜಾಗದಲ್ಲಿ ಟೂ ವೀಲರ್ ಮೋಡ್ ಸೇರಿಸಿದೆ.

ಭಾರತೀಯ ಬಳಕೆದಾರರಿಗೆ ಇದು ಗೂಗಲ್ ಮ್ಯಾಪ್ 9.67.1 ವರ್ಷನ್ ನಲ್ಲಿ ಕಾಣಿಸುತ್ತದೆ. ಗೂಗಲ್ ಮ್ಯಾಪ್ ನಲ್ಲಿ ಟೂ ವೀಲರ್ ಮೋಡ್ ಪಡೆದಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರವೂ ಒಂದು. ಬೈಕ್ ನಲ್ಲಿ ಪ್ರಯಾಣಸುವಾಗ ವಾಹನ ಸವಾರರಿಗೆ ‘ಟೂ ವೀಲರ್ ಮೋಡ್’ ವೇಗವಾದ ಮತ್ತು ಉತ್ತಮವಾದ ಮಾರ್ಗವನ್ನು ತಿಳಿಸುತ್ತದೆಯಂತೆ.

ಟೂ ವೀಲರ್ ಮೋಡ್ ನಲ್ಲಿ ಕಾಣಿಸುವ ಅಂದಾಜು ತಲುಪುವ ಸಮಯವು ಕಾರಿನ ಸಮಯಕ್ಕಿಂತ ಸ್ವಲ್ಪ ಕಡಿಮೆಯಿರುತ್ತದೆ. ಈ ಹೊಸ ಫೀಚರ್ ತಲುಪುವ ಸ್ಥಳಗಲ್ಲಿನ ಪಾರ್ಕಿಂಗ್ ಸೌಲಭ್ಯದ ಸ್ಥಿತಿಯನ್ನೂ ತೋರಿಸುತ್ತದೆಯಂತೆ.

Get Latest updates on WhatsApp. Send ‘Subscribe’ to 8550851559