ಹ್ಯಾಕರ್‌ಗಳಿಗೆ ಸುಲಭದ ತುತ್ತು ಗೂಗಲ್ ಪಿಕ್ಸೆಲ್

ಹೊಸ ಆಪರೇಟಿಂಗ್ ಸಿಸ್ಟಂ, ವೈಶಿಷ್ಟ್ಯಗಳೊಂದಿಗೆ ತನ್ನದೆ ಆದ ಬ್ರ್ಯಾಂಡ್ ‘ಪಿಕ್ಸೆಲ್’ ಫೋನ್ ಇತ್ತೀಚೆಗಷ್ಟೇ ಸಾಫ್ಟ್‌ವೇರ್ ದಿಗ್ಗಜ ಗೂಗಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಗೂಗಲ್ ಪಿಕ್ಸೆಲ್, ಪಿಕ್ಸೆಲ್ ಎಕ್ಸ್‌ಎಲ್ ಹೆಸರಿನಲ್ಲಿ ಆ ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ಯಿವೆ. ಆದರೆ ಆ ಫೋನುಗಳು ಹ್ಯಾಕರ್ ಗಳಿಗೆ ಸುಲಭದ ತುತ್ತು ಎನ್ನುವುದು ಈಗ ತಿಳಿದು ಬಂದಿದೆ. ಇದನ್ನು ಸ್ವತಃ ಗೂಗಲ್ ಸಂಸ್ಥೆ ಸಹಾ ಅಂಗೀಕರಿಸಿದೆ.

ಗೂಗಲ್ ಪಿಕ್ಸೆಲ್ ಫೋನ್‌ಗಳಲ್ಲಿನ ಪ್ಲೇ ಸ್ಟೋರ್ ಆಪ್, ಕ್ರೋಮ್ ಬ್ರೌಸರ್, ಮೊಬೈಲಿನಲ್ಲಿನ ಮೆಸೇಜ್ ಗಳು, ಕಾಂಟ್ಯಾಕ್ಟ್ಸ್, ಫೋಟೋ, ವೀಡಿಯೋಗಳನ್ನು ರಿಮೋಟ್ ಆಕ್ಸೆಸ್ ಮಾಡಿಕೊಳ್ಳಲು ಸೌಲಭ್ಯವಿದೆಯಂತೆ. ಆದರೆ ಇದು ಹ್ಯಾಕರ್ ಗಳಿಗೆ ತುಂಬಾ ಅನುಕೂಲವಾಗುತ್ತದೆಯಂತೆ. ಈ ಸೌಲಭ್ಯದಿಂದ ಅವರು ಆ ಫೋನ್ ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ಚೀನಾದ ಹ್ಯಾಕರ್ ಗ್ರೂಪ್ ಆದ ಕಿಹೂ 360 ಹೇಳಿದೆ. ಇದಕ್ಕೆ ಸಂಬಂಧಿಸಿದ ಹಲವು ವಿವರಗಳನ್ನು ಆ ತಂಡ ಗೂಗಲ್ ಗೆ ನೀಡಿದೆ.

ಗೂಗಲ್ ಆ ವಿವರಗಳನ್ನು ಆ ವಿವರಗಳನ್ನು ಪರಿಶೀಲಿಸಿ ಸತ್ಯ ಎಂಬುದು ಒಪ್ಪಿಕೊಂಡಿದೆ. ಚೀನಾದ ಆ ತಂಡ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದು ನಮಗೆ ತುಂಬಾ ಸಹಾಯ ಮಾಡಿದೆ, ಹಾಗಾಗಿಯೇ ಅವರಿಗೆ 1.20 ಲಕ್ಷ ಡಾಲರ್ ನಗದು ಬಹುಮಾನ ನೀಡಿದ್ದೇವೆ, ಶೀಘ್ರದಲ್ಲೇ ಆ ಸಾಫ್ಟ್‌ವೇರ್ ಲೋಪದೋಷವನ್ನು ಸರಿಪಡಿಸುತ್ತೇವೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

Related News

loading...
error: Content is protected !!